ರಾಯಚೂರು: ಸೆ-30: ದರ್ವೇಶ ಗ್ರೂಪ್ ಕಂಪನಿಯಿ0ದ ಹೂಡಿಕೆ ಮಾಡಿದ ಜನರ ನೂರಾರು ಕೋಟಿ ಹಣ ವಂಚನೆ ಪ್ರಕರಣಕ್ಕೆ ಸಂಭ0ದಿಸಿದ0ತೆ ಇನ್ನೂವರಗೂ ಏಜೆಂಟರ್ ಬಂಧನವಾಗಿಲ್ಲ, ತಕ್ಷಣ ಬಂದಿಸಬೇಕೆ0ದು ಮುಖಂಡ ಅಂಬಾಜಿ ರಾವ್ ಒತ್ತಾಯಿಸಿದರು.
ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಪ್ರಕರಣವನ್ನು ಸಿಓಡಿಗೆ ವಹಿಸಲಾಗಿದೆ. ಆದರೆ ಇನ್ನೂ ಮುಖ್ಯ ಆರೋಪಿ ಸುಜಾ ಮತ್ತು ಇತನೊಂದಿಗೆ ಇರುವ ಫಾರೂಕ್,ಮಿಸ್ಕನ್ ಎಂಬುವರನ್ನು ಪೊಲೀಸರು ಬಂದಿಸಿಲ್ಲ, ಅಲ್ಲದೇ ಮುಖ್ಯ ಪಾತ್ರದಾರಾದ ಏಜೆಂಟರನ್ನು ಸಹ ಬಂದಿಸಿಲ್ಲವೆ0ದರು. ಒಂದು ಕುಟುಂಬದ ಏಳು ಜನ ಏಜೆಂಟರೆ0ದು ಜನರ ಹಣ ಸಂಗ್ರಹಿಸಿದ್ದಾರೆ. ಇವರು ಪೂನಾ ಮತ್ತು ಇಂದೋರನಲ್ಲಿ ಈ ಹಣ ದಿಂದ ಆಸ್ತಿ ಮಾಡಿದ್ದರೆಂಬ ಮಾಹಿತಿ ಇದ್ದು, ತಕ್ಷಣ ಇವರನ್ನು ಬಂಧಿಸಿ ಇವರು ಮಾಡಿದ ಆಸ್ತಿ ಬಗ್ಗೆ ತನಿಖೆ ನಡೆಸಬೇಕು ಹಾಗೂ ಈ ಪ್ರರಣವನ್ನು ಸಿಬಿಐ ಅಥವಾ ಐ.ಟಿ.ಇಲಾಖೆಗೆ ಹಸ್ತಾಂತರ ಮಾಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಸೂದ್ ಅಲಿ,ಆಸೀಫ್, ಸೈಯದ್ ಇಮಾಮ್, ಜಾಫರ್, ಹಾಜಿ ಇಬ್ರಾಹಿಂ,ನಜೀರ್ ಬೇಗ್,ಶೇಖ ಅಖಾನಿ ಉಪಸ್ಥಿತರಿದ್ದರು.