ರಾಯಚೂರು: ನಗರದ ಬೋಳಮಾನ ದೊಡ್ಡಿ ರಸ್ತೆಯಲ್ಲಿರುವ ಆರ್ಶಿವಾದ ನಗರದ ೧೮ ನಿವೇಶನಗಳನ್ನು ಮಾಲೀಕರಿಗೆ ಮೂರು ತಿಂಗಳಲ್ಲಿ ಅವರವರ ನಿವೇಶನಗಳನ್ನು ಹಿಂದಿರುಗಿಸುವAತೆ ನ್ಯಾಯಾಲಯ ಆದೇಶಿಸದೆ ಎಂದು ಹಿರಿಯ ನ್ಯಾಯವಾದಿ ಸಿ.ಎಸ್.ರಸ್ತಾಪುರ್ ಹೇಳಿದರು.
ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಲಕ್ಷಿö್ಮÃದೇವಿ ಎಂಬುವವರು ಆಶೀರ್ವಾದ ನಗದ ಲೇಔಟ್‌ನಲ್ಲಿ ೨೦೫ ನಿವೇಶನಗಳ ಲೇಔಟ್ ಮಾಡಿಸಿದ್ದರು.೧೦೮ ನಿವೇಶನಗಳು ಮಾರಾಟ ಮಾಡಿದರು. ಆದರೂ ಮಾರಾಟ ಮಾಡುತ್ತಿರುವರಿಂದ ೨೪ ನ್ಯಾಯಾಲಯಕ್ಕೆ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದರು. ೧೮ ನಿವೇಶನದಾರರ ಪ್ರಕರಣದಲ್ಲಿ ಜಿಲ್ಲಾ ಪ್ರಧಾನ ನ್ಯಾಯಾಲಯ ಪರಿಶೀಲಿಸಿ ಮಹತ್ವದ ತೀರ್ಪು ನೀಡಿದೆ. ರವೀಂದ್ರ ಜಲ್ದಾರ್ ಎಂಬುವರು ಖೋಟ್ಟಿ ದಾಖಲೆ ಸೃಷ್ಠಿಸಿ ಶ್ಯಾಮಾಚಾರ ಎಂಬವರಿAದ ಖರೀದಿ ಮಾಡಿರುವದಾಗಿ ನಂಬಿಸಿ ನಿವೇಶನಗಳನ್ನು ಮಾರಾಟ ಮಾಡಿರುವ ಆರೋಪಗಳಿವೆ. ನಿವೇಶನ ಮಾಲೀಕರಿಗೆ ಮುಂದಿನ ಮೂರು ತಿಂಗಳಲ್ಲಿ ಅವರವರ ನಿವೇಶನ ಹಿಂದಿರುಗಿಸವAತೆ ಆದೇಶಿಸಲಾಗಿದೆ. ನ್ಯಾಯಾಲಯದ ತೀರ್ಪಿನ ಅನ್ವಯ ೧೮ ಜನರ ನಿವೇಶನಗಳಲ್ಲಿ ಮನೆಗಳಿದ್ದರೂ ಅವುಗಳನ್ನು ತೆರವುಗೊಳಿಸಿ ಸಂಬAಧಪಟ್ಟ ನಿವೇಶನದಾರರಿಗೆ ಈ ನಿವೇಶನ ನೀಡುವಂತೆ ನ್ಯಾಯಾಲಯ ತೀರ್ಪು ನೀಡಿದೆ. ಉಳಿದ ಏಳು ಅರ್ಜಿದಾರರು ಇದೇ ಅಧಾರದ ಮೇಲೆ ನ್ಯಾಯಾಲಯ ತೀರ್ಪು ನೀಡುವ ನಿರೀಕ್ಷೆಗಳಿವೆ. ಮುಂದಿನ ಮೂರು ತಿಂಗಳಲ್ಲಿ ಮಾಲೀಕರಿಗೆ ನಿವೇಶನ ಹಿಂತಿರುಗಿಸುವ ಪ್ರಕ್ರಿಯೆ ಕೈಗೊಳ್ಳದಿದ್ದರೆ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಮನೆಗಳನ್ನು ನಿರ್ಮಿಸಿಕೊಂಡವರು ಅವರೇ ಜವಾಬ್ದಾರಿಯಾಗಲಿದ್ದಾರೆಂದರು. ನ್ಯಾಯಾಲಯದ ಆದೇಶದಂತೆ ತೆರವುಗೊಳಿಸಿ ಮೂಲ ಮಾಲೀಕರಿಗೆ ನಿವೇಶ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಬಾಲಾಜಿ, ಶ್ರೀದೇವಿ, ಹುಸೇನಪ್ಪ ಭಂಡಾರಿ, ಓಂಕಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.