ರಾಯಚೂರು ಜ.೦೯ : ರಾಯಚೂರು ಸಹಾಯಕ ಆಯುಕ್ತರ ಆದೇಶದಂತೆ ಮತ್ತು ಜಿಲ್ಲಾ ಬಾಲಕಾರ್ಮಿಕ ಯೋಜನೆಯ ಯೋಜನಾ ನಿರ್ದೇಶಕರಾದ ಮಂಜುನಾಥ ರೆಡ್ಡಿ ಅವರ ಮಾರ್ಗದರ್ಶನದಲ್ಲಿ ದೇವದುರ್ಗ ತಾಲೂಕು ಕಾರ್ಮಿಕ ನಿರೀಕ್ಷಕರಾದ ಮಲ್ಲಪ್ಪ ಹಾಗೂ ದೇವದುರ್ಗ ಟ್ರಾಪಿಕ್ ಪೊಲೀಸ್ ಠಾಣೆ ಪಿ.ಎಸ್.ಐ ನಾರಾಯಣ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ತಿಕ್ಕಯ್ಯ, ಹುಸೇನ್ ನಾಯ್ಕ ಮತ್ತು ತಂಡದವರು ಜನವರಿ ೯ರಂದು ದೇವದುರ್ಗ ತಾಲೂಕಿನಲ್ಲಿ ಸರಕು ಸಾಗಣೆ ವಾಹನಗಳ ಮೇಲೆ ದಾಳಿ ನಡೆಸಿ ಮತ್ತೆ ೧೫ ಮಕ್ಕಳನ್ನು ರಕ್ಷಿಸಿದ್ದಾರೆ.
ಸಾರಿಗೆ ನಿರೀಕ್ಷಕರಾದ ರಾಕೇಶ್ ಎಮ್., ಇ.ಸಿ.ಓಗಳಾದ ರಾಜನಗೌಡ, ವೆಂಕಟೇಶ, ಬಿ.ಆರ್.ಪಿಗಳಾದ ಶಿವಕುಮಾರ ನಾಡಗೌಡ, ವೆಂಕಟಾಚಲಪತಿ, ಸಿ.ಆರ್.ಪಿಗಳಾದ ಸೋಮಶೇಖರ ದೊರೆ, ಟ್ರಾಫಿಕ್ ಪೊಲೀಸ್ ಠಾಣೆ ಸಿಬ್ಬಂದಿ ಸಂಗಪ್ಪ, ಮೋಹನ್, ಡಾನ್ ಬಾಸ್ಕೋ ಸಮಾಜ ಸೇವಾ ಸಂಸ್ಥೆಯ ಬಸವಲಿಂಗ ಮೇತ್ರಿ, ಮತ್ತು ನಾಗರಾಜ ಮತ್ತು ತಂಡದವರು ಜನವರಿ ೯ರಂದು ದೇವದುರ್ಗ ತಾಲೂಕಿನಲ್ಲಿ ಕಾರ್ಯಾಚರಣೆ ಕೈಗೊಂಡು ಮಕ್ಕಳನ್ನು ರಕ್ಷಿಸಿದ್ದಾರೆ.
ಮಕ್ಕಳನ್ನು ಶಾಲೆ ಬಿಡಿಸಿ ಕೃಷಿ ಚಟುವಟಿಕೆಗಳಿಗಾಗಿ ಸರಕು ಸಾಗಣೆ ವಾಹನಗಳಲ್ಲಿ ಕರೆದುಕೊಂಡು ಹೋಗಿ ಬಾಲಕಾರ್ಮಿಕತೆಯಲ್ಲಿ ತೊಡಗಿಸುತ್ತಿದ್ದ ೦೫ ವಾಹನಗಳನ್ನು ಜಪ್ತಿ ಮಾಡಿ ವಾಹನ ಮಾಲೀಕರು ಹಾಗೂ ಚಾಲಕರ ವಿರುದ್ಧ ಪೊಲೀಸ್ ಹಾಗೂ ಸಾರಿಗೆ ಇಲಾಖೆಯ ಅಧಿಕಾರಿಗಳು ಕ್ರಮ ವಹಿಸಿದ್ದಾರೆ.
ವಾಹನಗಳಲ್ಲಿ ಒಟ್ಟು ೧೫ ಮಕ್ಕಳು ಕಂಡುಬAದಿದ್ದು, ಆ ಎಲ್ಲಾ ಮಕ್ಕಳನ್ನು ಕೆಲಸಕ್ಕೆ ಹೋಗುವುದನ್ನು ತಡೆದು ಸಂಬAಧಪಟ್ಟ ಶಾಲೆಗಳಲ್ಲಿ ಪುನಃ ದಾಖಾಲಿಸಲಾಯಿತು.