ಕುಷ್ಟಗಿ: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸಿಎಂ ಸಿದ್ದರಾಮಯ್ಯನವರ ಕಾಂಗ್ರೇಸ್ ಸರಕಾರ ಅಮಾಯಕ ರೈತರು ಮಠ ಮಾನ್ಯಗಳನ್ನು ಸಹ ಬಿಡದೇ ಮತ ಓಲೈಕೆಗಾಗಿ ಪಹಣಿಗಳಲ್ಲಿ ವಕ್ಸ್ ಆಸ್ತಿ ಎಂದು ನಮೂದಿಸಿ ಅವರ ಜೀವನದಲ್ಲಿ ಚೆಲ್ಲಾಟವಾಡುತ್ತಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ಶಾಸಕ ದೊಡ್ಡನಗೌಡ ಪಾಟೀಲ ಅವರು ಹೇಳಿದರು.ನಗರದಲ್ಲಿ ಬಿಜೆಪಿ ಮಂಡಲದ ವತಿಯಿಂದ ಲ್ಯಾಂಡ್ ಜಿಹಾದ್ ಹಾಗೂ ವಕ್ಸ್ ಅಕ್ರಮ ವಿರೋಧಿಸಿ ಪ್ರತಿಭಟನೆಯ ನೇತೃತ್ವವನ್ನು ವಹಿಸಿ ಅವರು ಮಾತನಾಡಿದ,ರೈತರ ಹಾಗೂ ಮಠಮಾನ್ಯಗಳ ಆಸ್ತಿಯ ಪಹಣಿಯಲ್ಲಿ ವಕ್ಷೆ ಆಸ್ತಿ ಎಂದು ನಮೂದಿಸುತ್ತಿದ್ದು ಇದು ಬಹಳಷ್ಟು ಖಂಡನೀಯ ಇದನ್ನು ತಡೆಹಿಡಿಯಬೇಕು ಎಂದರು.ವಕ್ಸ್ ಬೋರ್ಡ ಎಂದು ಪಹಣಿಯಲ್ಲಿ ನಮೂದಾದರೆ ಇದರ ವಿರುದ್ಧ ಕಲಿಸುವ ಕೋರ್ಟಿನಲ್ಲಿಯೂ ಸಹಿತ ದಾವೆ ಹೂಡಲು ಸಾಧ್ಯವಿಲ್ಲ ಕಾರಣ ಇದನ್ನು ನಿಲ್ಲಿಸುವ ಕೆಲಸವಾಗಬೇಕು ಎಂದರು. ಮುಖ್ಯಮಂತ್ರಿಗಳು ಬೈ ಎಲೆಕ್ಷನ್ ಸಲುವಾಗಿ ಮತಗಳನ್ನು ಸೆಳೆಯುವ ಹಿನ್ನಲೆಯಲ್ಲಿ ನೋಟಿಸು ಕೊಡುವದನ್ನು ನಿಲ್ಲಿಸಲಾಗುತ್ತದೆ ಎಂದು ಹೇಳಿದ್ದಾರೆ ಹೊರತು ರೈತರ ಹಿತಕ್ಕಾಗಿ ನಿಲ್ಲಿಸಿಲ್ಲ.ಈ ಪ್ರಕ್ರೀಯೆ ಇಲ್ಲಿಗೆ ಕೊನೆಯಾಗಬೇಕು. ನೀಡಿರುವ ನೋಟಿಸುಗಳನ್ನು ವಾಪಸ್ಸು ಹಿಂಪಡೆಯಬೇಕು ಇಲ್ಲದಿದ್ದರೆ ರೈತರ, ಮಠ ಮಾನ್ಯಗಳ ಪರವಾಗಿ ಹೋರಾಟ ಮಾಡುತ್ತೇವೆ. ವಾಲ್ಮೀಕಿ ನಿಗಮದ ಹಗರಣ, ಮುಡಾ ಹಗರಣವನ್ನು ಮುಚ್ಚಿಹಾಕಲು ಇಂತಹ ಕೆಲಸಗಳನ್ನು ಮಾಡುತ್ತಿದ್ದು ಈ ನೀಚತನದ ಸರಕಾರಕ್ಕೆ ರಾಜ್ಯದ ಜನತೆಯು ಬುದ್ದಿ ಕಲಿಸುವ ಕೆಲಸ ಮಾಡುತ್ತದೆ.ಎಂದು ಹೇಳಿದರು.ಮಂಡಲದ ಅಧ್ಯಕ್ಷ ಮಹಾಂತೇಶ ಬಾದಾಮಿ ಮಾತನಾಡಿ ರೈತರ ಜಮೀನನ್ನು ಕಬಳಿಸುವ ಹುನ್ನಾರ ನಡೆಸಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಡಳಿತವೂ ಬಿನ್ ತುಘಲಕ್ ಆಡಳಿತವನ್ನು ನೆನಪಿಸುತ್ತಿದೆ ವಕ್ಸ್ ಎಂದು ನಮೂದಿಸಿರುವ ಎಲ್ಲಾ ರೈತ ವಿರೋಧಿ ಕಾಂಗ್ರೆಸ್ ಸರ್ಕಾರದ ಲ್ಯಾಂಡ್ ಜಿಹಾದ್ ಹಾಗೂ ವಕ್ಸ್ ಅಕ್ರಮ ವಿರೋಧಿಸಿ ರಾಜ್ಯಾದ್ಯಂತ ಬಿಜೆಪಿ ಪಹಣಿಗಳನ್ನು ತಿದ್ದುಪಡಿ ಮಾಡಿಸಬೇಕು, ನೀಡಿರುವ ನೋಟಿಸುಗಳನ್ನು ಹಿಂಪಡೆಯ ಬೇಕು ಎಂದರು.ಬಿಜೆಪಿ ಮಾಜಿ ಅಧ್ಯಕ್ಷ ಬಸವರಾಜ ಹಳ್ಳೂರು ಮಾತನಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಧರ್ಮದ ಓಲೈಕೆಗಾಗಿ ಇಂತಹ ಹೀನ ಕೃತ್ಯವನ್ನು ಮಾಡುತ್ತಿದ್ದು ಇದನ್ನು ನಿಲ್ಲಿಸಬೇಕು ಇಲ್ಲದಿದ್ದರೆ ರಾಜ್ಯಾದಾದ್ಯಂತ ಉಗ್ರವಾದ ಹೋರಾಟ ಮಾಡಲಾಗುತ್ತದೆ ಎಂದು ಹೇಳಿದರು.ಪಕ್ಷದ ಮುಖಂಡರಾದ ನಬಿಸಾಬ ಕುಷ್ಟಗಿ,ಬಸವರಾಜ ಉಪಲದಿನ್ನಿ ಮಾತನಾಡಿದರು. ಪ್ರತಿಭಟನೆ:ಕುಷ್ಟಗಿ ಪಟ್ಟಣದ ಮಲ್ಲಯ್ಯ ವೃತ್ತದಿಂದ ಪ್ರಾರಂಭವಾದ ಪ್ರತಿಭಟನಾಕಾರರು ಕರ್ನಾಟಕ ವನ್ನು ಪಾಕಿಸ್ಥಾನವನ್ನಾಗಿ ಮಾಡಲು ಸಿದ್ದರಾಮಯ್ಯಗೆ ಧಿಕ್ಕಾರ, ಪ್ರಾಣ ಹೊರಟ ಕೊಟ್ಟೆವೂ ಭೂಮಿ ಬಿಡೇವೂ ಹಿಂದೂ ವಿರೋಧಿ ಕಾಂಗ್ರೇಸ್ ಸರ್ಕಾರಕ್ಕೆ ಧಿಕ್ಕಾರ, ರೈತರ ಬದುಕಿಗೆ ಕೊಳ್ಳಿಯಿಟ್ಟ ಸಚಿವ ಜಮೀರ್ ಅಹ್ಮದ ರಾಜೀನಾಮೆ ಕೊಡಿ, ಅನ್ನದಾತರ ಜಮೀನು ಕಬಳಿಸಿದ ಜಮೀರ ಧಿಕ್ಕಾರ, ಸಿದ್ದರಾಮಯ್ಯ ಹಾಗೂ ಜಮೀರ್ ಕುತಂತ್ರಕ್ಕೆ ಧಿಕ್ಕಾರ. ಇದೆ ಅನೇಕ ಘೋಷಣೆಯ ಫಲಕಗಳನ್ನು ಹಿಡಿದುಕೊಂಡು ಘೋಷಣೆ ಗಳನ್ನು ಕೂಗುತ್ತಾ ಬಸ್ ನಿಲ್ದಾಣ, ಮಾರುತಿ ವೃತ್ತ ಹಾಗೂ ಬಸವೇಶ್ವರ ವೃತ್ತದವ ಸಮಾವೇಶಗೊಂಡು ತಹಸೀ ಲ್ದಾರ ಅಶೋಕ ಶಿಗ್ಗಾಂವಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಪಕ್ಷದ ಪ್ರಮುಖರಾದ ಶೈಲಜಾ ಬಾಗಲಿ, ಕಲ್ಲೇಶ ತಾಳದ, ಅಶೋಕ ಬಳೂಟಗಿ ಬಿಜೆಪಿ ಪಕ್ಷದ ಮುಖಂಡರು ಸೇರಿದಂತೆ ಅನೇಕ ಕಾರ್ಯಕರ್ತರು ಇದ್ದರು.