ಲಿಂಗಸುಗೂರು : ಈಚನಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಸರ್ವೇ ನಂ೪೦/*/೧ ಹಾಗೂ ೫೦/*/೨ಗಳಲ್ಲಿ ಮನೆಗಳನ್ನು ಕಟ್ಟಿಕೊಂಡಿರುವ ಈ ೮೩ ಕುಟುಂಬಗಳಿಗೆ ಹಕ್ಕು ಪತ್ರ ಮಂಜೂರಾತಿ ಮಾಡಬೇಕೆಂದು ಕನ್ನಡ ಸೇನೆ ಕರ್ನಾಟಕ ಕಾರ್ಯಕರ್ತರು ಮುಖ್ಯಮಂತ್ರಿಗೆ ಬರೆದ ಮನವಿ ಪತ್ರವನ್ನು ಸಹಾಯಕ ಆಯುಕ್ತ ಅವಿನಾಶ ಶಿಂಧೆ ಅವರ ಮುಖಾಂತರ ಮನವಿ ಸಲ್ಲಿಸಿದರು.
ತಾಲೂಕಿನ ಸಮೀಪ ಈಚನಾಳ ಪಂಚಾಯಿತಿಲ್ಲಿ ಬರುವ ಸದರಿ ಮನೆಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದ್ದು, ಸದರಿಯವರು ಅಕ್ರಮವಾಗಿ ಮನೆ ಕಟ್ಟಿಕೊಂಡಿದ್ದನ್ನು ಹೊರತುಪಡಿಸಿ ಅವರಿಗೆ ಹಾಗೂ ಅವರ ಕುಟುಂಬ ವರ್ಗದವರಿಗೆ ಯಾವುದೇ ರೀತಿಯ ಮನೆಗಳು ಇರುವುದಿಲ್ಲ, ಆದ ಕಾರಣ ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ಮನೆ ಕಟ್ಟಿಕೊಂಡ ನಿವೇಶನ ರಹಿತರಿಗೆ ಅದನ್ನು ಸಕ್ರಮಗೊಳಿಸಿ ಎಂದು ೨೦೧೬ ರಲ್ಲಿ ಮನವಿ ಸಲ್ಲಿಸಿಲಾಗಿತ್ತು, ಆದರೆ ಏಳು ವರ್ಷಗಳು ಕಳೆದರು ಇನ್ನೂ ಹಕ್ಕುಪತ್ರ ನೀಡಿಲ್ಲ ಕೂಡಲೇ ಅಲ್ಲಿನ ವಾಸ ಮಾಡುವ ಕುಟುಂಬಗಳಿಗೆ ಹಕ್ಕು ಪತ್ರ ಮಂಜೂರು ಮಾಡಬೇಕೆಂದು ಒತ್ತಾಯಿಸಿದರು.
ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ಶರಣೋಜಿ ಪವಾರ್, ಶರೀಫ ಎಲ್, ಮೌನೆಶ. ಟಿ, ಮಲ್ಲನಗೌಡ, ಮಾಲಿಂಗ, ಚಂದ್ರು, ಪರಶುರಾಮ ಪಾಟೀಲ, ಯಲಪ್ಪ ಗೌಂಡಿ, ನಾಗಪ್ಪ, ದೇವರಾಜ, ರಮೇಶ ಪಾಟೀಲ, ಮಹಾದೇವಪ್ಪ, ದೇವರಾಜ, ಮೌನೆಶ ಇತರರು ಸೇರಿದಂತೆ ಇದ್ದರು.