ರಾಯಚೂರು: ಬೆಳ್ಳಂ ಬೆಳಗ್ಗೆ ನಗರದ ಬಸವೇಶ್ವರ ವೃತ್ತದಲ್ಲಿ ಬಸ್ ನಿಲ್ದಾಣ ಕಡೆಯಿಂದ ಹೈದ್ರಾಬಾದ್ ಕಡೆ ಹೋಗುತ್ತಿದ್ದ ವಿಆರ್ಎಲ್ ಬಸ್ ಮತ್ತು ಡಿ,ಸಿ.ಕಛೇರಿ ಕಡೆಯಿಂದ ಕೃಷಿ ವಿವಿ ಆಟದ ಮೈದಾನದ ಕಡೆ ಹೋಗುತ್ತಿದ ಕಾರು ಮಧ್ಯೆ ಅಪಘಾತ ಸಂಭವಿಸಿದೆ,
ಬಸ್ ಡಿಕ್ಕಿ ಹೊಡೆದ ರಬಸಕ್ಕೆ ಕಾರು ಡಿ.ಸಿ.ಕಛೇರಿ ಕಡೆಯಿಂದ ಬಸ್ ನಿಲ್ದಾಣದ ಕಡೆ ತಿರುಗಿ ನಿಂತ್ತಿತ್ತು. ಕಾರ್ ಚಾಲನೆ ಮಾಡುತ್ತಿದ್ದ ವ್ಯಕ್ತಿಗೆ ಕಿವಿ ಪಕ್ಕದಲ್ಲಿ ಗಾಯವಾಗಿದ್ದು, ಬಸ್ನಲ್ಲಿ ಪ್ರಯಾಣಿಸುತ್ತಿದ ಪ್ರಯಾಣಿಕರು ಇಳಿದು ಬೇರೆ ಬಸ್ನಿಂದ ಪ್ರಯಾಣ ಬೆಳಸಿದರು. ಸಂಚಾರಿ ಪೊಲೀಸ್ ಠಾಣೆಯಲ್ಲ ಪ್ರಕರಣ ದಾಖಲಾಗಿದೆ.