ಬಳ್ಳಾರಿ, ನ.೭:ನಗರದ ಒಂದು ವೃತ್ತಕ್ಕೆ ವೀರ ವನಿತೆ ಒನಕೆ ಓಬವ್ವ ಅವರ ಹೆಸರು ನಾಮಕರಣ ಮಾಡಬೇಕು ಎಂದು ಛಲವಾದಿ ಮಹಾಸಭಾ ಜಿಲ್ಲಾ ಘಟಕ ಒತ್ತಾಯಿಸಿದೆ.
ವೀರ ವನಿತೆ ಒನಕೆ ಓಬವ್ವನ ಜಯಂತಿಯ ಆಚರಣೆಯ ಹಿನ್ನಲೆಯಲ್ಲಿ ಬುಧುವಾರ ಅಪರ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ಸಭೆಯಲ್ಲಿ ಭಾಗವಹಿಸಿದ್ದ ಸಿಎಂಎಸ್ ಜಿಲ್ಲಾಧ್ಯಕ್ಷ ಸಿ.ಶಿವಕುಮಾರ್ ಒತ್ತಾಯಿಸಿದರು. ಸಭೆಯ ಬಳಿಕ ಜಿಲ್ಲಾ ಪದಾಧಿಕಾರಿಗಳು ಎಡಿಸಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ವೀರ ವನಿತೆ ಒನಕೆ ಓಬವ್ವ ಅವರ ತವರೂರು ಅವಿಭಜಿತ ಬಳ್ಳಾರಿ ಜಿಲ್ಲೆಯ ಗುಡೇಕೋಟೆಯಾಗಿರುವುದು ಅತ್ಯಂತ ಹೆಮ್ಮೆಯ ವಿಷಯವಾಗಿದೆ. ಈ ಹಿನ್ನಲೆಯಲ್ಲಿ ಬಳ್ಳಾರಿ ನಗರದ ನಗರದ ಒಂದು ವೃತ್ತಕ್ಕೆ ವೀರವನಿತೆ ಒನಕೆ ಓಬವ್ವ ಹೆಸರಿಡಬೇಕು ಎಂದು ಮೌಖಿಕವಾಗಿ ಮನವಿ ಮಾಡಿದರು. ತಮ್ಮ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಅಪರ ಜಿಲ್ಲಾಧಿಕಾರಿಗಳು ತಮಗೆ ಒಂದು ಮನವಿ ಪತ್ರವನ್ನು ಸಲ್ಲಿಸಿದರೆ ನಾಮಕರಣ ಮಾಡಲಿಕ್ಕೆ ರ‍್ಕಾರಕ್ಕೆ ಹಾಗೂ ಸಂಬಂಧಪಟ್ಟ ಮಹಾನಗರ ಪಾಲಿಕೆ ಇವರಿಗೆ ಶಿಫಾರಸ್ಸು ಮಾಡುತ್ತೇನೆ ಎಂದು ಹೇಳಿದರು.
ಒನಕೆ ಓಬವ್ವ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸುವುದು ಸೇರಿದಂತೆ ಇನ್ನಿತರ ವಿಷಯಗಳ ರ‍್ಚೆ ಮಾಡಲಾಯಿತು ಎಂದು ಶಿವಕುಮಾರ್ ತಿಳಿಸಿದ್ದಾರೆ. ಪರ‍್ವಭಾವಿ ಸಭೆಯಲ್ಲಿ ಜಿಲ್ಲಾ ಕರ‍್ಯಧ್ಯಕ್ಷ ಸಿ.ಹನುಮೇಶ ಕಟ್ಟಿಮನಿ, ರ‍್ನಾಟಕ ದಲಿತ ರಕ್ಷಣಾ ವೇದಿಕೆ ಮುಖಂಡ ತಿಪ್ಪೇಸ್ವಾಮಿ ಸಂಗನಕಲ್, ಸಿಎಂಎಸ್ ಜಿಲ್ಲಾ ಉಪಾಧ್ಯಕ್ಷ ಮಾನಯ್ಯ ಬಿ ಗೋನಾಳ್, ಜಿಲ್ಲಾ ಪ್ರಧಾನ ಕರ‍್ಯರ‍್ಶಿಗಳಾದ ಲೋಕೇಶ್ ಛಲವಾದಿ, ಕೆ ಶಂಕರ್ ನಂದಿಹಾಳ್, ರ‍್ನಾಟಕ ದಲಿತ ರಕ್ಷಣಾ ವೇದಿಕೆಯ ವೆಂಕಟೇಶ್, ಜಿಲ್ಲಾ ಜಂಟಿ ಕರ‍್ಯರ‍್ಶಿ ಶೇಷಪ್ಪ, ಮುಖಂಡರಾದ ಮಲ್ಲಿಕರ‍್ಜುನ ಬಿ ಗೋನಾಳ್, ಗಾದಿಲಿಂಗಪ್ಪ, ಡಿ ರಾಮಕೃಷ್ಣ ಛಲವಾದಿ ಮತ್ತಿತರರು ಭಾಗವಹಿಸಿದ್ದರು.
——