ರಾಯಚೂರು: ಆ-೩೦: “ಕ್ರೀಡೆಯಲ್ಲಿ ಗೆಲ್ಲುವು- ಸೋಲು ಮುಖ್ಯವಲ್ಲ ಕ್ರೀಡಾಪಟುಗಳು ಕ್ರೀಡಾ ಸ್ಪೂರ್ತಿಯಿಂದ ಭಾಗವಹಿಸುವುದು ಮುಖ್ಯವಾಗಿದೆ ಎಂದು ಮಾಜಿ ಅಸ್ವಿಟೆಂಟ್ ಗೌವರ್ನರ ರೋಟರಿ ಕ್ಲಬ್ ಎನ್ ಶಿವಶಂಕರ ವಕೀಲ ಹೇಳಿದರು.
ಜಿಲ್ಲಾಡಳಿತ,ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಟೇಬಲ್ ಟೆನಿಸ್ ಅಸೋಸಿಯೇಷನ್, ರೋಟರಿ ಕ್ಲಬ್ ರಾಯಚೂರು ಸಂಯುಕ್ತ ಆಶ್ರಯದಲ್ಲಿ ರಾಷ್ಟಿçÃಯ ಕ್ರೀಡಾಕೂಟ ದಿನಾಚರ ಣೆಯನ್ನು ಧ್ಯಾನ್ ಚಂದ್ ಇವರ ನೆನಪಿನಲ್ಲಿ ಜಿಲ್ಲಾ ಮಟ್ಟದ ಟೇಬಲ್ ಟೆನ್ನಿಸ್ ಟೂರ್ನಾಮೆಂಟ್ ಆಯೋಜಿಸಿದ್ದು ವಿಜೇತ ಕ್ರೀಡಾಪಟುಗಳಿಗೆ ಬಹುಮಾನ ವಿತರಣೆ ಮಾಡಿ ಮಾತನಾಡಿದರು. ಇಂದಿನ ಯುವ ಜನಾಂಗ ಮತ್ತು ಮಕ್ಕಳು ಹೆಚ್ಚಿನ ಸಮಯವನ್ನು ಮೊಬೈಲ್‌ನಲ್ಲಿ ಕಳೆಯುತ್ತಿದ್ದಾರೆ ಯಾವುದೇ ಕ್ರೀಡೆ ಯಲ್ಲಿ ಭಾಗವಹಿಸ್ತಿಲ್ಲ ಇದು ದುರಂತ, ಪಾಲಕರು ತಮ್ಮ ಮಕ್ಕಳನ್ನು ಕ್ರೀಡೆಯಲ್ಲಿ ಭಾಗವಹಿಸಲು ಆಸಕ್ತಿ ವಹಿಸಬೇಕು ಇದರಿಂದ ಅವರ ಆರೋಗ್ಯವಾಗಿ ಸದೃಢವಾಗಿರುತ್ತಾರೆಂದರು.
ಯುವ ಜನ ಸೇವಾ ಕ್ರೀಡಾಧಿಕಾರಿ ಈರಶನಾಯಕ ಮಾತನಾಡಿ ನಮ್ಮ ಇಲಾಖೆಯಿಂದ ರಾಯಚೂರು ನಗರದಲ್ಲಿ ಈಗಾಗಲೇ ಹಲವಾರು ಕ್ರೀಡೆಗಳನ್ನು ಆಯೋಜಿಸಲಾಗುತ್ತಿದೆ ಪಿಡೆಯನ್ನು ಪ್ರೋತ್ಸಾಹಲು ಎಲ್ಲ ರೀತಿಯ ವ್ಯವಸ್ಥೆಯನ್ನು ಮಾಡಲಾಗುತ್ತಿದೆ ಈಗ ಟೇಬಲ್ ಟೆನ್ನಿಸ್ ಆಟಗಾರರಾಗಿ ಪ್ರತ್ಯೇಕ ಒಳಾಂಗಣ ಕ್ರೀಡಾಂಗಣವನ್ನು ನಿರ್ಮಾಣ ಮಾಡಲು ರಾಜ್ಯ ಸರ್ಕಾರದಿಂದ ೫೦ ಲಕ್ಷ ಮಂಜೂರಾಗಿದ್ದು ಸದ್ಯದಲ್ಲಿ ಆ ಕಟ್ಟಡದ ಕಾಮಗಾರಿ ನಿರ್ಮಾಣ ಮಾಡಲಾಗುತ್ತಿದ್ದೆ
ರೋಟರಿ ಕ್ಲಬ್ ಅಧ್ಯಕ್ಷ ರವಿಕುಮಾರ್ ಗಣೆಕಲ್ ಮಾತನಾಡಿ “ರೋಟರಿ ಕ್ಲಬ್ ವತಿಯಿಂದ ಈ ಕ್ರೀಡಾಕೂಟ ಆಯೋಜಿಸಿದ್ದು ಕ್ರೀಡೆಯನ್ನು ಪ್ರೋತ್ಸಾಹಿಸುವುದರ ಜೊತೆಗೆ ಮಕ್ಕಳಲ್ಲಿ ಮತ್ತು ಯುವಕ ಕ್ರೀಡೆಯ ಬಗ್ಗೆ ಆಸಕ್ತಿ ಉತ್ತೇಜಿಸಲು ಈ ಕ್ರೀಡಾಕೂಟ ಹಮ್ಮಿಕೊಳ್ಳಲಾಗಿದೆ ಈಗಾಗಲೇ ಒಳಾಂಗಣ ಕ್ರೀಡಾಂಗಣ ನಿರ್ಮಾಣ ಮಾಡಿದ್ದು ಟೇಬಲ್ ಟೆನ್ನಿಸ್ ಆಟಗಾರರಾಗಿ ಪ್ರತ್ಯೇಕ ಒಳಾಂಗಣ ಕ್ರೀಡಾಂಗಣವನ್ನು ನಿರ್ಮಾಣ ಮಾಡಲು ರಾಜ್ಯ ಸರ್ಕಾರದಿಂದ ೫೦ ಲಕ್ಷ ಮಂಜೂರಾಗಿದ್ದು ಸದ್ಯ ಆ ಕಟ್ಟಡದ ಕಾಮಗಾರಿ ನಿರ್ಮಾಣ ನಡೆಯುತ್ತಿದ್ದು ನಿಗದಿತ ಸಮಯದಲ್ಲಿ ಪೂರ್ಣಗೊಳಿಸಲಾಗುವುದು ಎಂದರು
ಮಹಿಳಾ ವಿಭಾಗದಲ್ಲಿ ಸಿಂಗಲ್ ಪ್ರಥಮದಲ್ಲಿ ಕುಮಾರಿ ಶಾಗುಪ್ತ,ದ್ವಿತೀಯ ಶಬೀನ ಬಾನು, ಡಬಲ್ಸ್ ನಲ್ಲಿ ಪ್ರಥಮ ಪಲ್ಲವಿ, ಸಂಜನ, ಪುರುಷರ ವಿಭಾಗದ ಸಿಂಗಲ್ಸ್ ನಲ್ಲಿ ಪ್ರಥಮ ಸಂಜಯ,ದ್ವಿತೀಯ ವಿಶ್ವನಾಥ ಡಬಲ್ಸ್ ನಲ್ಲಿ ಪ್ರಥಮ ಪಿ. ವಿಶ್ವನಾಥ್,ವಿಜಯಕುಮಾರ ಬಡಿಗೇರ್ ದ್ವಿತೀಯ ಬಿ ವಿಶ್ವನಾಥ ಅಮೇರಶ ಪತ್ತಾರ ಬಹುಮಾನ ಪಡೆದರು
ಜಿಲ್ಲಾ ಬ್ಯಾಡ್ಮಿಂಟನ್ ಮಾಜಿ ಅಧ್ಯಕ್ಷ ಬೆಲಂಕಿರಣ್ ಜಿಲ್ಲಾ ಟೇಬಲ್ ಟೆನಿಸ್ ನ ಪದಾಧಿಕಾರಿಗಳಾದ ಸಂಜಯ್, ಈರಣ್ಣ ಆಂಟೋನಿ ಸೆಲ್, ಪ್ರಕಾಶ್, ಜಯಶಂಕರ ವಿಜಯಕುಮಾರ್ ಮಂಜುನಾಥ್, ವಿಶ್ವನಾಥ್, ಅಯ್ಯಣ್ಣ, ಆಯುಬ್, ಉಪಸಿತಿದ್ದರು