ಶಹಾಪುರ: ನಗರದ ತಾಲೂಕು ಕ್ರೀಡಾಂಗಣದಲ್ಲಿ ಜರುಗಿದ ವಲಯ ಮಟ್ಟದ ವಿವಿಧ ಕ್ರೀಡಾ ಪಂದ್ಯಾವಳಿಗಳಲ್ಲಿ ಚರಬಸವೇಶ್ವರ ಪ್ರೌಢಶಾಲಾ ವಿದ್ಯಾರ್ಥಿಗಳು ಸ್ಪರ್ಧಿಸಿ ಉತ್ತಮ ಸಾಧನೆ ಮಾಡಿ ತಾಲೂಕ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು ಶಾಲೆಯ ಮುಖ್ಯಗುರು ತಿಪ್ಪಣ್ಣ ಜಮಾದಾರ ತಿಳಿಸಿದರು.
200 ಮೀ. ಓಟ ಮತ್ತು ಉದ್ದ ಜಿಗಿತದಲ್ಲಿ ಅವಿನಾಶ, 4೦೦ ಮೀ. ರೀಲೆ ಓಟದಲ್ಲಿ ಮರೆಪ್ಪ, ಆನಂದ, ಪ್ರಭು, ಅವಿನಾಶ ಹಾಗೂ ಭರ್ಚಿ ಎಸೆತದಲ್ಲಿ ಮರೆಪ್ಪ ಮತ್ತು ಬಾಲಕೀಯರ ಕಬಡ್ಡಿ ಪಂದ್ಯಾವಳಿಯಲ್ಲಿ ನೀಲಮ್ಮ, ಸೀಮಾ, ಗೌರಮ್ಮ, ಸೀಮಾ ಎನ್, ರೇಣುಕಾ, ಪರಮಜ್ಯೋತಿ, ಶ್ರೀದೇವಿ, 1೦೦ ಮೀ. ಓಟದಲ್ಲಿ ರಾಧಾ ಇವರೆಲ್ಲರೂ ಪ್ರಥಮ ಸ್ಥಾನ ಪಡೆದಿದ್ದಾರೆ. 1೦೦ ಮೀ. ಓಟದಲ್ಲಿ ಪ್ರಭು, 4೦೦ ಮೀ. ಓಟದಲ್ಲಿ ಮರೆಪ್ಪ, 15೦೦ ಮೀ. ಓಟದಲ್ಲಿ ಭೀಮರಡ್ಡಿ, ರೀಲೆಯಲ್ಲಿ ಪ್ರಭು, ಅವಿನಾಶ, ಮರೆಪ್ಪ, ಉಮೇಶ ಹಾಗೂ 4೦೦ ಮೀ. ಓಟದಲ್ಲಿ ಮಮತಾ, ರೀಲೆಯಲ್ಲಿ ರಾಧಾ, ಸೀಮಾ, ಮಮತಾ, ಶಿಲ್ಪಾ ಇವರೆಲ್ಲರೂ ದ್ವಿತೀಯ ಸ್ಥಾನ ಪಡೆದಿದ್ದಾರೆ. ಈ ಎಲ್ಲಾ ಕ್ರೀಡಾಪಟುಗಳು ತಾಲೂಕು ಮಟ್ಟದ ಕ್ರೀಡಾ ಪಂದ್ಯಾವಳಿಗಳಿಗೆ ಆಯ್ಕೆಯಾಗಿದ್ದಾರೆ.
ವಿದ್ಯಾರ್ಥಿಗಳ ಕ್ರೀಡಾ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಬಸವರಾಜಪ್ಪಗೌಡ ದರ್ಶನಾಪುರ ಹಾಗೂ ಕಾರ್ಯದರ್ಶಿ ಘೇವರಚಂದ ಜೈನ್, ಮುಖ್ಯಗುರು ತಿಪ್ಪಣ್ಣ ಜಮಾದಾರ, ದೈಹಿಕ ಶಿಕ್ಷಣದ ಶಿಕ್ಷಕ ರಾಹುಲ್ ಮಲ್ಲಾಬಾದಿ ಮತ್ತು ಶಿಕ್ಷಕವೃಂದದವರು ಹಾಗೂ ಸಿಬ್ಬಂದಿ ವರ್ಗ ಅಭಿನಂದಿಸಿ ಹರ್ಷವ್ಯಕ್ತಪಡಿಸಿದ್ದಾರೆ.