ಶಹಾಪುರ,ಮೇ.14:
ತಾಲೂಕಿನ ವಿಭೂತಿಹಳ್ಳಿ ಗ್ರಾಮದಲ್ಲಿ ಸೋಮವಾರ ಮುಂಜಾನೆ ಸಿಡಿಲು ಬಡಿದು ಗೋವಿಂದಪ್ಪ ಎನ್ನುವ ಕುರಿಗಾಯಿ ಸೇರಿದಂತೆ ಏಳು ಕುರಿಗಳು ಮೃತಪಟ್ಟಿದ್ದವು.ಇಂದು ರಾಜ್ಯ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ದೇವೇಂದ್ರಪ್ಪ ಮರ್ತೂರು ಭೇಟಿ ನೀಡಿ ಸಾಂತ್ವನ ಹೇಳಿದರು.ಈ ಸಂದರ್ಭದಲ್ಲಿ ರಾಜ್ಯ ಕುರಿ ಮತ್ತು ಮೇಕೆ ಸಾಕಾಣಿಕೆದಾರರ ರಾಜ್ಯ ನಿರ್ದೇಶಕರಾದ ಶಾಂತಗೌಡ ನಾಗನಟಗಿ ಸಾಥ್ ನೀಡಿದರು.
ಕುರಿಗಾರರಿಗೆ ನಿಗಮದಿಂದ ಸಿಗುವ ಸೌಲಭ್ಯಗಳನ್ನು ಹಾಗೂ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಸೌಲಭ್ಯ ಸಿಗುತ್ತಿದ್ದರೆ ಅದರಿಂದಲೂ ಕೂಡ ಮೃತ ಗೋವಿಂದಪ್ಪನ ಕುಟುಂಬದವರಿಗೆ ಒದಗಿಸಿಕೊಡಲಾಗುವುದು.ಕುಟುಂಬದವರು ಯಾವುದೇ ಕಾರಣಕ್ಕೂ ಆತಂಕಪಡಬಾರದು ಎಂದು ಕುಟುಂಬದವರಿಗೆ ಅಧ್ಯಕ್ಷರಾದ ದೇವೇಂದ್ರಪ್ಪ ಮರ್ತೂರು ತಿಳಿಸಿದರು.ಸ್ಥಳೀಯ ಶಾಸಕರಾದ ಶರಣಬಸಪ್ಪಗೌಡ ದರ್ಶನಾಪುರ ಅವರೊಂದಿಗೆ ಚರ್ಚಿಸಿ ಕುಟುಂಬದವರಿಗೆ ವಸತಿ ವ್ಯವಸ್ಥೆ ಕಲ್ಪಿಸಿ ಕೊಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸ್ಥಳೀಯ ಪಶು ಇಲಾಖೆ ಅಧಿಕಾರಿಗಳಿಗೆ ಯಾವುದೇ ಕಾರಣಕ್ಕೂ ವಿಳಂಬ ಮಾಡದೆ ದಾಖಲಾತಿಗಳನ್ನು ಮೇಲಾಧಿಕಾರಿಗಳಿಗೆ ಕಳಿಸಿ ಕೊಡುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಡಾ.ರಾಜಶೇಖರ್ ಕಾಸ್ಬಾಗ್ ಸಹಾಯಕ ನಿರ್ದೇಶಕರು ಕರ್ನಾಟಕ ಕುರಿ ಮತ್ತು ಉಣ್ಯ ಅಭಿವೃದ್ಧಿ ನಿಗಮ ಯಾದಗಿರಿ, ಶಹಪುರು ತಾಲೂಕು ಪಶು ವೈದ್ಯಾಧಿಕಾರಿ ಡಾ.ಷಣ್ಮುಖಪ್ಪ ಗೊಂಗಡಿ, ಮುಖಂಡರಾದ ಮಲ್ಲಿಕಾರ್ಜುನ ಬೊಮಕೂರು ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರು, ಚಂದ್ರಶೇಖರ ನೀರಡಗಿ ಜೇವರ್ಗಿ ಓಬಿಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು. ರೇವಣಸಿದ್ದಪ್ಪ ಮುಗುಟ.ಬಲಭೀಮ ಮಡ್ನಾಳ್ ಸೇರಿದಂತೆ ಇತರರು ಇದ್ದರು.