ಔರಾದ : ಕೇಂದ್ರ ರ‍್ಕಾರದ ಮಹತ್ವದ ಯೋಜನೆಯಾದ “ಜಲ ಜೀವನ್ ಮಿಷನ್’ (ಜೆಜೆಎಂ) ಅಡಿಯಲ್ಲಿ ಅಗತ್ಯವಿರುವ ಗ್ರಾಮಗಳಿಗೆ, ಅಲ್ಲದೆ, ಪ್ರತಿ ವ್ಯಕ್ತಿಗೆ ದಿನಕ್ಕೆ 55 ಲೀ. ಶುದ್ಧ ಕುಡಿಯುವ ನೀರು ಒದಗಿಸುವ ಗುರಿ ಹೊಂದಿದೆ. ಆ ಮೂಲಕ ನೇರವಾಗಿ ಮನೆಗಳಿಗೆ ನಲ್ಲಿ ಮೂಲಕ ನೀರು ಸರಬರಾಜು ಮಾಡಿ ನೀರಿನ ಅಪವ್ಯಯ ತಪ್ಪಿಸುವುದೂ ಆಗಿದೆ.
ತಾಲೂಕಿನ ಮಹಾರಾಜವಾಡಿ ಗ್ರಾಮದಲ್ಲಿ ಕಳೆದ ಒಂದು ವರೆ ರ‍್ಷದಿಂದ “ಜಲ ಜೀವನ್ ಮಿಷನ್’ ಕಾಮಗಾರಿ ನಡೆಯುತ್ತಿದೆ. ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದೆ. ಆದರೆ, ಈ ಜೆಜೆಎಂ ಕಾಮಗಾರಿ ನೆಪದಿಂದ ಉತ್ತಮ ಸಿಸಿ ರಸ್ತೆಗಳನ್ನು ಎಲ್ಲೆಂದರಲ್ಲಿ ಅಗೆದು ಸುಗಮ ಸಂಚಾರಕ್ಕೆ ತೀವ್ರ ತೊಂದರೆ ಉಂಟು ಮಾಡುವಂತಾಗಿದೆ. ಈ ಹಿಂದೆ ನರ‍್ಮಾಣವಾದ ಸಿಸಿ ರಸ್ತೆಗಳು ಹಾಳು ಮಾಡುತ್ತಿರುವುದರಿಂದ ಗ್ರಾಮಸ್ಥರು ಗುತ್ತಿಗೆದಾರರಿಗೆ, ಅಧಿಕಾರಿಗಳಿಗೆ ಹಿಡಿ ಶಾಪ ಹಾಕುವಂತಾಗಿದೆ
ಗ್ರಾಮದಲ್ಲಿ ಇಲ್ಲಿತನಕ ಕೊಳವೆ ಬಾವಿ ಕೊರೆಸಿಲ್ಲ,
ಜನತೆಯ ಜೀವದ ಜತೆಗೆ ಚಲ್ಲಾಟ ಆಡುವಂತಾಗಿದೆ.
ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಸಂಬಂಧಪಟ್ಟ ಜೆಇ, ಎಇಇ. ಲಕ್ಷಂತರ್ ಮೊತ್ತದ ಯೋಜನೆ ಗ್ರಾಮದಲ್ಲಿ ಸರಿಯಾದ ಅನುಷ್ಠಾನದ ಕೊರತೆಯಿಂದ ಹಳ್ಳ ಹಿಡಿದಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.