ಸಿರುಗುಪ್ಪ.ಆ.೨೭:- ಭೂಮಿಯ ಮೇಲೆರುವ ಪ್ರತಿಯೊಬ್ಬ ಮನುಷ್ಯನ ದೇಹದಲ್ಲಿರುವುದು ಒಂದೇ ರಕ್ತ, ಮನುಷ್ಯ ಆರೋಗ್ಯವಾಗಿರಲು ಶುದ್ಧ ರಕ್ತದ ಅವಶ್ಯಕತೆ ಇರುತ್ತದೆ. ಜಗತ್ತಿನೆಲ್ಲೆಡೆ ಪ್ರತಿಕ್ಷಣ ಲೆಕ್ಕವಿಲ್ಲದಷ್ಟು ಜನರಿಗೆ ರಕ್ತದ ಅವಶ್ಯ ವಿರುತ್ತದೆ. ಅನೇಕರು ಸರಿಯಾದ ಸಮಯಕ್ಕೆ ರಕ್ತ ಸಿಗದೆ ಸಾವನ್ನಪ್ಪುತ್ತಾರೆ. ಅದಕ್ಕಾಗಿಯೇ ರಕ್ತವನ್ನು ಜೀವದ್ರವ್ಯ ಎಂದು ಕರೆಯಲಾಗುತ್ತದೆ ಎಂದು ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ವಿದ್ಯಾಶ್ರೀ ತಿಳಿಸಿದರು.
ನಗರದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದಲ್ಲಿ ಮಾತನಾಡಿದ ಅವರು ದಾನಗಲಲ್ಲಿ ರಕ್ತದಾನವನ್ನು ಬಹಳ ಶ್ರೇಷ್ಟ ದಾನವೆಂದು ಕರೆಯಲಾಗುತ್ತದೆ. ಈ ಹಿನ್ನಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ಪ್ರತಿವರ್ಷ ಜೂನ್ ೧೪ ರಂದು ವಿಶ್ವ ರಕ್ತದಾನಿಗಳ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ.
ವಿಜ್ಞಾನ, ತಂತ್ರಜ್ಞಾನದಲ್ಲಿ, ವೈದ್ಯಕೀಯ ರಂಗದಲ್ಲಿ ನಡೆದ ಮಹತ್ತರ ಪ್ರಗತಿಗಳು, ಅಚ್ಚರಿ ಬೆಳವಣಿಗೆಗಳು ವಿವಿಧ ರೀತಿಯಲ್ಲಿ ಜನ ಜೀವನವನ್ನು ಬದಲಾಯಿಸಿದ್ದರೂ ಒಂದು ಜೀವದ ಉಳಿವಿಗಾಗಿ ಬೇಕಾದ ರಕ್ತ ಎನ್ನುವ ಜೀವಾಮೃತಕ್ಕೆ ಪರ್ಯಾಯವಾಗಿ ಈ ವರೆಗೆ ಕೃತಕ ರಕ್ತ ತಯಾರಿಸಲು ಸಾಧ್ಯವಾಗಿಲ್ಲ. ಈ ಕಾರಣಕ್ಕಾಗಿಯೇ ರಕ್ತದಾನವು ತನ್ನದೇ ಆದ ಪವಿತ್ರತೆಯಿಂದ ಸರ್ವಶ್ರೇಷ್ಠ ದಾನವಾಗಿ ಗುರುತಿಸಿಕೊಂಡಿದೆ ಎಂದು ಹೇಳಿದರು.
ಆಶಾ ಕಾರ್ಯಕರ್ತೆಯರು ಮತ್ತು ಸಾರ್ವಜನಿಕರು ಇದ್ದರು.
ಸಿರುಗುಪ್ಪ, ನಗರದಲ್ಲಿ ರಕ್ತದಾನ ಶಿಬಿರ:
WhatsApp Group
Join Now