ಕುಷ್ಟಗಿ:ಲೋಕಸಭಾ ಚುನಾವಣಾ ಪ್ರಯುಕ್ತ ಸಾಯಂಕಾಲ ದೋಟಿಹಾಳ ಗ್ರಾಮದ ಶುಕಮುನಿ ದೇವಸ್ಥಾನದ ಆವರಣದಲ್ಲಿ ಪ್ರಚಾರ ಸಭೆ ಹಮ್ಮಿಕೊಳ್ಳಲಾಗಿತ್ತು. ಈ ದೇಶದ – ಮತ್ತು ರಾಜ್ಯದ ಜನರಿಗೆ ಬರೀ ಸುಳ್ಳು ಆಶ್ವಾಸನೆ ನೀಡುತ್ತಾ ಯಾವ ಅಭಿವೃದ್ಧಿಯನ್ನು ಮಾಡದೇ ಜನರ ಕೈಗೆ ಖಾಲಿ ಚೊಂಬು ನೀಡಿದ್ದು ಈ ಬಾರಿ ೨೦೦ ಸೀಟ್ ಗೆಲ್ಲುವುದು – ಮೋದಿಯವರ ಪಕ್ಷಕ್ಕೆ ಕಠಿಣ ಇದೆ.ಎಂದು ಮಾಜಿ ಶಾಸಕ ಹಾಗೂ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಮರೇಗೌಡ ಬಯ್ಯಾಪುರ ಹೇಳಿದರು.ಮಾಜಿ ಶಾಸಕ ಕಾಡಾ ಅಧ್ಯಕ್ಷ ಹಸನಸಾಬ ದೊಟಿಹಾಳ ಮಾತಾನಾಡಿ ಹತ್ತು ವರ್ಷ ಮೋದಿಯವರು ಆಡಳಿತ
ಮಾಡಿದರು.ಬಿಜೆಪಿ ಡಬಲ್ ಇಂಜಿನ್ ಸರಕಾರ ಯಾವ ಬಡವರ ರೈತರ ಉದ್ದಾರ ಆಗಲಿಲ್ಲ. ಯುವಕರು ಉದ್ಯೋಗದ ಭರವಸೆಯನ್ನು ನಂಬಿ ಬಿಜೆಪಿಗೆ ಮತ ನೀಡಿದ್ರೆ ಯುವಕರಿಗೆ ಬಿಜೆಪಿಯವರು ಮೋಸ ಮಾಡಿದ್ರು. ರಾಜ್ಯದಲ್ಲಿ ಮುಸ್ಲಿಂರ ಮೀಸಲಾತಿ ತೆಗೆದರು. ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ನಮ್ಮ ಸಿಎಂ ಸಿದ್ಧರಾಮಯ್ಯನವರ ಸರ್ಕಾರ ಬಡವರಿಗಾಗಿ ಗ್ಯಾರಂಟಿ ಯೋಜನೆಗಳನ್ನು ಕೊಟ್ಟಿದ್ದಾರೆ. ನುಡಿದಂತೆ ನಡೆಯುವ ಕಾಂಗ್ರೆಸ್ ಪಕ್ಷಕ್ಕೆ ನಮ್ಮ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಅವರಿಗೆ ಮತ ನೀಡಿ ಗೆಲ್ಲಿಸಿ ಎಂದು ಹೇಳಿದರು.ವಿಜಯ ನಾಯಕ ಮಾತನಾಡಿ ಮಾಜಿ ಶಾಸಕ ಅಮರೇಗೌಡ ಅವರ ನೇರ ನುಡಿ. ನಿಷ್ಠೆ ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತ ಮೆಚ್ಚಿ ಬಿಜೆಪಿ ಬಿಟ್ಟು ಬಂದೆ. ಬಿಜೆಪಿ ಅಚ್ಛೆ ದಿನ್ ಬರುತ್ತೆ ಅಂತ
ಸುಳ್ಳು ಹೇಳುತ್ತಾ ಯಾವ ಅಭಿವೃದ್ಧಿ ಮಾಡಲಿಲ್ಲ. ಆದ್ದರಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಮತ ನೀಡಿ ಗೆಲ್ಲಿಸಿ ಎಂದರು.ಈ ಸಂದರ್ಭದಲ್ಲಿ ಮಾಜಿ ಶಾಸಕ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಮರೇಗೌಡ ಬಯ್ಯಾಪುರ, ಮಾಜಿ ಶಾಸಕ ಕಾಡಾ ಅಧ್ಯಕ್ಷ ಹಸನಸಾಬ ದೋಟಿಹಾಳ, ಮಾಜಿ ಜಿ.ಪಂ ಸದಸ್ಯ ವಿಜಯ ನಾಯಕ, ಶೇಖರಗೌಡ ಮಾಲಿಪಾಟೀಲ, ಅಮರೇಗೌಡ ವಕೀಲ, ಶಂಕರಗೌಡ ವಕೀಲ, ರಾಮನಗೌಡ ಬಿಜ್ಜಲ, ಉಮೇಶ ಮಂಗಳೂರ, ಮಲ್ಲಣ್ಣ ಶೆಟ್ಟರ, ಲಾಡ್ಲೆಮಷಾಕ ದೋಟಿಹಾಳ, ಗುರುಸಿದ್ದಯ್ಯ ಮಳೀಮಠ, ದೋಟಿಹಾಳ ಗ್ರಾಮ ಪಂಚಾಯತಿ ಅಧ್ಯಕ್ಷ ಮಹೇಶ ಕಾಳಗಿ, ಚೇತನಕುಮಾರ ಮುದೇನೂರ, ಶೇಖರಪ್ಪ ದೊಡ್ಡಮನಿ ಸೇರಿದಂತೆ ಅನೇಕರು ಇದ್ದರು.
ಬಿಜೆಪಿಯ ಅಭಿವೃದ್ಧಿ ಎಂದರೆ ಜನರ ಕೈಗೆ ಕೊಟ್ಟಿದ್ದು ಖಾಲಿ ಚೊಂಬು ಮಾಜಿ ಶಾಸಕ ಬಯ್ಯಾಪೂರ
WhatsApp Group
Join Now