ರಾಯಚೂರು,ಜೂ.29: ಹಾಲಿಗೆ ಪ್ರೋತ್ಸಾಹ ಧನ ಬಿಡುಗಡೆ ಸೇರಿದಂತೆ ವಿವಿಧ ಬೇಡಿಕೆಗಳು ಈಡೇರಿಸಲು ಬಿಜೆಪಿ ರೈತ ಮೋರ್ಚಾ ಒತ್ತಾಯಿಸಿದೆ.
ನಂತರ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಿ, ಗ್ರಾಹಕರಿಗೆ ಹಾಲಿನ ದರವನ್ನು ಪಾಕೆಟ್‌ಗೆ 2 ರೂ. ಏರಿಸಿ ಸರಕಾಋ ಖಜಾನೆಯನ್ನು ಪರೋಕ್ಷವಾಗಿ ತುಂಬಿಸಿಕೊಳ್ಳು ಹೊಂಚು ಹಾಕಿದೆ. ಇದರಿಂದ ಗ್ರಾಹರಿಗೆ ಹೊರಯಾಗಿದೆಯೇ ಹೊರತು ಈ ದರ ಹೆಚ್ಚಳ ದಿಂದ ರೈತರಿಗೇನು ಲಾಭವಾಗಿಲ್ಲವೆಂದು ದೂರಿದರು. ರಾಜ್ಯ ಸರಕಾರ ದಿಂದ ರೈತರಿಗೆ ಅನ್ಯಾವಾಗುತ್ತಿದೆ. ಕಷ್ಟದಲ್ಲಿರುವ ರೈತರನ್ನು ಮೇಲೆತ್ತುವ ಪ್ರಯತ್ನ ಮಾಡಬೇಕು, ರಐತರ ಬದುಕು ಇಂದು ಮುರಾಬಟ್ಟಿಯಾಗಿದೆ. ಸರಕಾರ ಅಧಿಕಾರಜಕ್ಕೆ ಬಂದ ಒಂದು ವರ್ಷದೊಳಗೆ ಹಾಲಿನ ದರ ಏರಿಕೆ ಮಾಡಿದ ಎಂದು ದೂರಲಾಯಿತು.
ಪೆಟ್ರೋಲ್ ಹಾಗೂ ಡೀಸೆಲ್ ದರ ಹೆಚ್ಚಳ ಮಾಡಲಾಗಿದೆ. ಮುದ್ರಾಂಕ ಶುಲ್ಕವೂ ಸಹ ದುಬಾರಿಯಾಗಿದೆ. ನೀರಾವರಿಗಾಗಿ ವಿದ್ಯುತ್ ಸಂಪರ್ಕ ಶುಲ್ಕವನ್ನು ಹೆಚ್ಚಳ ಮಾಡಿದ್ದರಿಂದ ರೈತರು ತೊಂದ್ರ ಅನುಭವಿಸುವಂತೆ ಮಾಡಿದೆ. ಸರಕಾರ ಕೃಷಿ ಪರಿಕರಗಳ ಸಬ್ಸಿಡಿಯ ಹಣವನ್ನು ಸಹ ನೀಡಿಲ್ಲ, ಇದೀಗ ಬಿತ್ತನೆ ಕಾರ್ಯ ಆರಂಭವಾಗಿದ್ದು, ಬೀಜಗಳ ದರ ಏರಿಕೆಯಹಾಗಿದೆ. ವಿದ್ಯಾನಿಧಿ ಯೋಜನೆಯಹನ್ನು ರದ್ದುಗೊಳಿಸಿದ್ದಾರೆ. ಕೃಷಿ ಸಮ್ಮಾನ ನಿಧಿಯಡಿ 4000 ಹಣ ರದ್ದುಗೊಂಡಿದೆ. ಕೂಡಲೇ ಈ ಎಲ್ಲಾ ದರಗಳನ್ನು ಇಳಿಕೆ ಮಾಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಅಧ್ಯಕ್ಷ ಸಿದ್ದನಗೌಡ ನೆಲಹಾಳ, ಜಿ.ಶಂಕರ ರೆಡ್ಡಿ, ಸಂತೋಷ, ನಾಗನಗೌಡ, ಶಿವಪ್ಪ, ಶಿವಲಿಂಗಯ್ಯ, ರಾಜೇಶ, ಕೊಟ್ರೇಶಪ್ಪ ಕೋರಿ, ಉಮಾಪತಿ ನಾಯಕ, ಬಾಲಕಿ ನಾಗರಜ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.