ಮುದಗಲ್: ಪಟ್ಟಣದ ಎಪಿಎಂಸಿ ಮಾರುಕಟ್ಟೆಯಲ್ಲಿ ಪ್ರತಿ ಭಾನುವಾರ ನಡೆಯುವ ಕುರಿ ಮತ್ತು ಮೇಕೆ ಸಂತೆಯಲ್ಲಿ ಬಿಲ್ಲಿ ಜೂಜಾಟ ದಂಧೆ ರಾಜಾರೋಷವಾಗಿ ನಡೆಯುತ್ತಿದೆ.ಜೂಜಾಟ ದಂಧೆ ನಡೆಸುವವರು ಪ್ರತಿ ಒಬ್ಬರಂತೆ ಐದಾರು ಗುಂಪುಗಳನ್ನು ಮಾಡಿಕೊಂಡು ಒಬ್ಬೊಬ್ಬರು ಒಂದೊಂದು ಸ್ಥಳದಲ್ಲಿ ಟೇಬಲ್ ಹಾಕಿಕೊಂಡು ಜನರನ್ನು ಆಕರ್ಷಿಸುವ ರೀತಿಯಲ್ಲಿ ಬಿಲ್ಲಿಗಳನ್ನು ಅತ್ತದಿಂದ ಇತ್ತು ಕಡೆ ವೃತ್ತದಿಂದ ಅತ್ತೆ ಕಡೆ ಕೈ ಚಳಕ ಮಾಡಿ ಹಣ ಹಾಕಿಸಿಕೊಂಡು ಅಲ್ಪ ಮೊತ್ತದ ಹಣ ಜನರಿಗೆ ಬರುವಂತೆ ಮತ್ತು ದೊಡ್ಡ ಮೊತ್ತದ ಹಣವನ್ನು ಮ್ಯಾಜಿಕ್ ಮಾಡುವ ಮೂಲಕ ತಮ್ಮದಾಗಿಸಿಕೊಂಡು ಜನರನ್ನು ಯಾಮಾರಿಸುತ್ತಾರೆ ಎಂದು ಸಂತೆಯಲ್ಲಿ ಸಾರ್ವಜನಿಕರು ಗಂಭೀರವಾಗಿ ಆರೋಪಿಸಿದ್ದಾರೆ.ಪ್ರತಿ ವಾರ ಸಂತೆಗೊಮ್ಮೆ ಲಕ್ಷಾನುಗಟ್ಟಲೆ ಬಿಲ್ಲಿ ಜೂಜಾಟ ನಡೆಯುತ್ತಿದ್ದರೂ, ಪೊಲೀಸರು ಮಾತ್ರ ಕ್ರಮಕ್ಕೆ ಮುಂದಾಗದಿರುವುದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಅಡ್ಡೆ ನಡೆಸುವವರು ಆಯಾ ವ್ಯಾಪ್ತಿಯ ಠಾಣೆಗಳಿಗೆ ಮಾಮೂಲಿ ಕಳುಹಿಸುವುದರಿಂದ ಪೊಲೀಸರು ಕ್ರಮಕ್ಕೆ ಮುಂದಾಗುತ್ತಿಲ್ಲ ಎಂಬುದು ಸಾರ್ವಜನಿಕರ ಆರೋಪವಾಗಿದೆ. ಅದಕ್ಕೆ ಪೂರಕವೆಂಬಂತೆ ಅಡ್ಡೆ ನಡೆಸುವವರು ಸಹ ತಮ್ಮ ಅಡ್ಡೆಗಳ ಮೇಲೆ ಪೊಲೀಸರು ದಾಳಿ ನಡೆಸುವುದಿಲ್ಲ. ಅವರಿಗೆ ತಲುಪಿಸ ಬೇಕಾಗಿರುವುದನ್ನು ತಲುಪಿಸುತ್ತೇವೆ.ಹೀಗಾಗಿ ಧೈರ್ಯವಾಗಿ ಜೂಜಾಟವಾಡಲು ಬನ್ನಿ ಎಂದು ಕುರಿ ಸಂತೆ ಬಜಾರಿನಲ್ಲಿ ಯಾವುದೇ ಭಯವಿಲ್ಲದೆ ಆಟಗಾರರಿಗೆ ಭರವಸೆ ನೀಡುತ್ತಿರುವುದು ಇದಕ್ಕೆ ಪೊಲೀಸ್ ಇಲಾಖೆ ಮೌನಕ್ಕೆ ಸಾಕ್ಷಿಯಾಗಿದೆ.ದಿನದಿಂದ ದಿನಕ್ಕೆ ತಲೆ ಎತ್ತುತ್ತಿರುವ ಜೂಜು ಅಡ್ಡೆಗಳಿಂದಾಗಿ ಬದುಕೇ ಡೋಲಾಯಮಾನವಾಗಿದೆ.ಈಗಾಗಲೇ ಗ್ರಾಮೀಣ ಭಾಗದ ಜನರು ಜೂಜಾಟ ನಡೆಸುವವರ ಬಲೆಗೆ ಸಿಲುಕಿ ತೊಂದರೆ ಅನುಭವಿಸುತ್ತಿದ್ದಾರೆ. ಜೂಜಾಟದಲ್ಲಿ ಜನರು ಹಣ ಕಳೆದುಕೊಳ್ಳುವ ಸಮಯಕ್ಕಾಗಿ ಕಾಯುವ ದಂಧೆ ನಡೆಸುವ ಕಿಂಗ್‌ಪಿನ್‌ಗಳು ಸ್ಥಳದಲ್ಲಿಯೇ ಶೇ.5 ಮತ್ತು10 ಬಡ್ಡಿಗೆ ಸಾಲ ಕೊಟ್ಟು ಲಾಭಮಾಡಿಕೊಳ್ಳುತ್ತಾರೆ.ನಿಗದಿತ ಸಮಯಕ್ಕೆ ಸಾಲ ಮರುಪಾವತಿ ಮಾಡದಂತಹ ಸಂದರ್ಭದಲ್ಲಿ ಮನೆಗಳ ಬಳಿ ಹೋಗಿ ಹಣಕ್ಕೆ ಬೇಡಿಕೆಯಿಡುತ್ತಾರೆ.ಜತೆಗೆ ಮನೆಯವರು ಹಾಗೂ ಊರಿನವರ ಮುಂದೆ ಮರ್ಯಾದೆ ತೆಗೆಯುವ ಬೆದರಿಕೆ ಹಾಕುತ್ತಾರೆಂಬ ಆರೋಪಗಳು ಕೇಳಿಬಂದಿವೆ.ಕಳೆದ ಭಾನುವಾರ ಕುರಿ ಮತ್ತು ಮೇಕೆ ಮಾರಾಟ ಸಂತೆಯಲ್ಲಿ ಜೂಜಾಟ ನಡೆಸುವವರು ಮತ್ತು ಆಡುವವರ ಮದ್ಯ ಹಣದ ವಿಚಾರದಲ್ಲಿ ಜಗಳವಾಡಿ ಒಬ್ಬರಿಗೊಬ್ಬರು ಬಡಿದಾಡಿಕೊಂಡಿದ್ದರು ಇದನ್ನು ಅರಿತ ಪೊಲೀಸರು ಸಮಸ್ಯೆಯನ್ನು ಬಗೆಹರಿಸಿದ್ದೆವೆ ಎಂದು ಹೇಳಿ ಸದ್ದಿಲ್ಲದೆ ಸುದ್ದಿಯಾಗದಂತೆ ಜಾಣ ನಡೆ ಅನುಸರಿಸಿದರು.ಜಗಳದ ಪರಿಣಾಮದಿಂದ ಹಾಗೂ ಪೊಲೀಸರ ಮಾತಿಗೆ ಬೆಲೆ ಕೊಟ್ಟು ದಂಧೆಕೊರರು ಜೂಜಾಟ ಆಡದೆ ಬುದ್ಧಿ ಕಲಿತಿರಬಹುದು ಎನ್ನುವ ಸಾರ್ವಜನಿಕರು ವಲಯದಲ್ಲಿ ಕೇಳಿ ಬಂದಿತ್ತು
ಆದರೆ ನಿನ್ನೆ ನಡೆದ ಸಂತೆಯಲ್ಲಿ ನಾಯಿ ಬಾಲ ಡೊಂಕು ಎನ್ನುವಂತೆ ಜೂಜಾಟ ದಂಧೆ ನಡೆಸುವವರು ಹಳೆ ಚಾಳಿ ಮುಂದಾಗಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.
ಕುರಿ ಸಂತೆಯಲ್ಲಿ ಜೂಜಾಟ ದಂಧೆ ನಡೆಯುತ್ತಿದ್ದು ಕೆಲವರಿಗೆ ಇದೆ ಜೀವನ ಮಾಡಿಕೊಂಡಿದ್ದಾರೆ.ಅಧಿಕಾರಿಗಳ ಗಮನಕ್ಕೆ ಇದ್ದರೂ ಕ್ರಮಕ್ಕೆ ಹಿಂದೇಟು ಹಾಕುತ್ತಿರುವುದು ಬೇಸರ ತಂದಿದೆ
– ಬಸವರಾಜ
ಬಂಕದಮನಿ ದಲಿತ ಸಂಘಟನೆ ಮುದಗಲ್