ಮುಖ್ಯ ರಸ್ತೆಯಿಂದ ರೈಲ್ವೆ ನಿಲ್ದಾಣದವರೆಗೆ ಸುಸಜ್ಜಿತ ರಸ್ತೆ ನಿರ್ಮಾಣಕ್ಕೆ ಸಂಸದರಿAದ ಭೂಮಿ ಪೂಜೆ

Eshanya Times

ಸಿಂಧನೂರು,ಅ.೩೦ : ನಗರದ ಗಂಗಾವತಿ ಮುಖ್ಯ ರಸ್ತೆಯಿಂದ ಸಿಂಧನೂರು ರೈಲ್ವೆ ಸ್ಟೇಷನ್‌ವರೆಗೆ ಸಿ.ಸಿ ರಸ್ತೆ ಕಾಮಗಾರಿಗೆ ಕೊಪ್ಪಳ ಸಂಸದ ರಾಜಶೇಖರ ಹಿಟ್ನಾಳ್ ಭೂಮಿ ಪೂಜೆ ಮಮಾಡುವ ಮೂಲಕ ಚಾಲನೆ ನೀಡಿದರು.
ಅವರು ಬುಧವಾರದಂದು ನಗರದ ಸತ್ಯಗಾರ್ಡನ್ ಹತ್ತಿರ ಹಮ್ಮಿಕೊಂಡಿದ್ದ ಸಿಸಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಮಾತನಾಡಿ ರೈಲ್ವೆ ಸ್ಟೇಷನ್ ರಸ್ತೆ ಸುಮಾರು 9.5 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ರಸ್ತೆ ಈ ಭಾಗದ ಜನರ ಬಹು ದಿನದ ಬೇಡಿಕೆಯಾಗಿದ್ದು, ಗುತ್ತೇಧಾರರು ಮತ್ತು ಅಧಿಕಾರಿಗಳು ತಮಗೆ ನೀಡಿರುವ ಸಮಯದಲ್ಲಿಯೇ ಗುಣ ಮಮಟ್ಟದ ಕಾಮಗಾರಿ ನಿರ್ವಹಿಸಬೆಕೆಎಂದು ಅಧಿಕಾರಿಗಳಿಗೆ ತಿಳಿಸಿದರು.
ಕಾರ್ಯಕ್ರಮವನ್ನುದ್ದೇಶಿಸಿ ಮೇಲ್ಮನೆ ಶಾಸಕ ಬಸನಗೌಡ ಬಾದರ್ಲಿ, ಶಾಸಕ ಹಂಪನಗೌಡ ಬಾದರ್ಲಿ ಮಾತನಾಡಿದರು. ಈ ಸಂಧರ್ಭದಲ್ಲಿ ಲಿಂಗಪ್ಪ ದಡೇಸ್ಗೂರು, ಹೆಚ್.ಭಾಷಾ, ಶೇಖರಪ್ಪ ಗಿಣಿವಾರ, ಶರಣಪ್ಪ ಉಪ್ಪಲದೊಡ್ಡಿ, ಬಸವರಾಜ ಹಿರೇಗೌಡರ್, ಖಾಜಿ ಮಲ್ಲಿಕ್, ಶಬ್ಬೀರ್, ನೀರಾವರಿ ಇಲಾಖೆ ಅಧಿಕಾರಿ ಸತ್ಯನಾರಾಯಣ ಶೆಟ್ಟಿ, ಜಾಫರ್ ಅಲಿ ಜಾಗೀರದಾರ್, ಅಶೋಕ ಉಮಲೂಟಿ, ಜಿಲಾನಿ ಪಾಷಾ, ಲಿಂಗರಾಜ ಹಂಚಿನಾಳ, ಶಿವಕುಮಾರ ಉಪ್ಪಲದೊಡ್ಡಿ ಮುಂತಾದವರಿದ್ದರು.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

error: Content is protected !!
";