ಸಿಂಧನೂರು,ನ.16 : ಅಕಾಲಿಕ ಮಳೆಯಿಂದ ಹಾನಿಗಿಡಾದ ಭತ್ತದ ಬೆಳೆದ ಗ್ರಾಮಗಳಿಗೆ ವಿಧಾನ ಪರಿಷತ್ ಸದಸ್ಯ ಬಸನಗೌಡ ಬಾದರ್ಲಿ ತಾಲೂಕ ಮಮಟ್ಟದ ಅಧಿಕಾರಿಗಳೊಂದಿಗೆ ಬೇಟಿ ನೀಡಿ ರೈತರಿಗೆ ಪರಿಹಾರ ಕೊಡಿಸುವ ಭರವಸೆ ನೀಡಿದರು.
ಬೆಳಿಗ್ಗೆ ತಹಶೀಲ್ದಾರರು, ಕೃಷಿ ಅಧಿಕಾರಿಗಳು ಹಾಗೂ ಕಂದಾಯ ಇಲಾಖೆ ಆರ್.ಐ ಮತ್ತು ವಿ.ಎ ಗಳೊಂದಿಗೆ ಜಂಟಿ ಸರ್ವೆ ಮಾಡಿಸಲು ಗೊರೇಬಾಳ, ಸಾಲಗುಂದ, ಜಾಲಿಹಾಳ ಹೋಬಳಿಯ ಹಾನಿಗೀಡಾದ ಪ್ರದೇಶಗಳಿಗೆ ಬೇಟಿ ನೀಡಿ ಹಾನಿಗೀಡಾದ ಭತ್ತದ ಗದ್ದೆಗಿಳಿದು ವಿಕ್ಷಿಸಿ, ಖುದ್ದು ಮಾಹಿತಿ ಪಡೆದು ಅಧಿಕಾರಿಗಳೊಂದಿಗೆ ಜಂಟಿ ಸರ್ವೆ ಮಾಡಿಸಲಾಯಿತು. ಸಂಬAದಿಸಿದ ಸಚಿವರೊಂದಿಗೆ ಹಾಗೂ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿದ್ದು, ಜಂಟಿ ಸರ್ವೆ ವರದಿ ಬಂದ ನಂತರ ಹಾನಿ ಪ್ರಮಾಣ ಆಧರಿಸಿ ಪರಿಹಾರ ನೀಡಲು ನಾನು ಸರ್ಕಾರ ಮಟ್ಟದಲ್ಲಿ ರೈತರ ಪರವಾಗಿ ಒತ್ತಡ ಹಾಕುತ್ತೇನೆ ಎಂದರು.
ಈ ಸಂದರ್ಭದಲ್ಲಿ ತಹಶೀಲ್ದಾರ ಅರುಣ ದೇಸಾಯಿ, ಸಹಾಯಕ ಕೃಷಿ ಅಧಿಕಾರಿ ನಜೀರ್ ಅಹ್ಮದ್, ಕಂದಾಯ ಇಲಾಖೆಯ ಅಧಿಕಾರಿಗಳು, ಹಾಗೂ ಕಾಂಗ್ರೆಸ್ ಮುಖಂಡರಾದ ಶಿವಕುಮಾರ ಜವಳಿ, ವೆಂಕಟೇಶ ರಾಗಲಪರ್ವಿ, ಯಂಕನಗೌಡ ಗಿಣಿವಾರ, ಖಾಜಾ ಹುಸೇನ್ ರೌಡಕುಂದ, ವೀರಾಜು ಬೂದಿವಾಳ ಕ್ಯಾಂಪ್, ಮಲ್ಲಿಕಾರ್ಜುನ ಹುಡಾ, ಹೇಮಾರಾಜ ಗೊಬ್ಬರಕಲ್, ಸದ್ದಾಂ ರೌಡಕುಂಡ, ಅಮರೇಶಗೌಡ ಗೋರೆಬಾಳ, ಪ್ರಕಾಶ ಸೋಮಲಪುರ, ಸಂತೋಷ್, ಮಹೇಶ ಮುಂತಾದವರಿದ್ದರು.