ಮುಖ್ಯಮಂತ್ರಿ ಹೇಳಿಕೆಗೆ ಬಂಜಾರ ಸಂಘ ಖಂಡನೆ

Eshanya Times

ಲಿಂಗಸೂಗೂರ : ಎ.ಜೆ ಸದಾಶಿವ ಆಯೊಗದ ವರದಿಯಂತೆ ಸಚಿವ ಸಂಪುಟದಲ್ಲಿ ನಡೆದ ಒಳ ಮೀಸಲಾತಿ ಜಾರಿ ಮಾಡಲು ಬದ್ದ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ಕೊಟ್ಟಿರುವುದು ಖಂಡನೀಯ. ಯಾವುದೇ ಕಾರಣಕ್ಕೂ ಒಳ ಮೀಸಲಾತಿ ಜಾರಿ ಮಾಡಬಾರದೆಂದು ಆಗ್ರಹಿಸುವ ಮೂಲಕ ಬಂಜಾರ ಸೇವಾ ಸಂಘದಿಂದ ಸಹಾಯಕ ಆಯುಕ್ತ ಬಸವಣೆಪ್ಪ ಕಲಶೆಟ್ಟಿ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಕಳೆದ ೨ ದಶಕಗಳಿಂದ ಸದಾಶಿವ ಆಯೋಗದ ವರದಿ ಜಾರಿ ಕುರಿತು ಪರ-ವಿರೋಧ ರ‍್ಚೆ ಇದ್ದು ಆಯೋಗದ ವರದಿ ಅವೈಜ್ಞಾನಿಕವಾಗಿದೆ. ಒಳ ಮೀಸಲಾತಿ ಜಾರಿ ಡಾ.ಬಾಬಾ ಸಾಹೇಬರ ಅಂಬೇಡ್ಕರ ರವರು ರಚನೆ ಮಾಡಿದ ಸಂವಿಧಾನಕ್ಕೆ ದಕ್ಕೆ ತರುವ ಕೆಲಸವಾಗಿದೆ. ಒಳ ಮೀಸಲಾತಿ ಜಾರಿ ದಲಿತರ ಸಮುದಾಯಗಳನ್ನು ವಿಭಜಿಸುವ ತಂತ್ರವಾಗಿದೆ.

ಇದೇ ೧೯ರಂದು ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಮುಖಂಡರ ಜೊತೆಗೆ ನಡೆದ ಸಭೆಯಲ್ಲಿ ಒಳ ಮೀಸಲಾತಿ ನರ‍್ಧಾರಕ್ಕೆ ಬದ್ದವಾಗಿದ್ದು ಹಿಂದೆ ಸರಿಯುವುದಿಲ್ಲ ಎಂದು ಹೇಳಿ ಅದರಂತೆ 24-10-2024 ಸಚಿವ ಸಂಪುಟದ ಸಭೆ ನಡೆಸಿ ರ‍್ಚಿಸಿ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನೀಡಿದ ಹೇಳಿಕೆ ಖಂಡನೀಯವಾಗಿದೆ. ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎ.ಜೆ ಸದಾಶಿವ ಒಳ ಮೀಸಲಾತಿ ಜಾರಿ ಪಟ್ಟಬದ್ರ ರಾಜಕೀಯ ಹಿತಾಸಕ್ತಿಗಳ ಷಡ್ಯಂತ್ರವಾಗಿದೆ. ಇದರ ಜೊತೆಗೆ ೯೯ ದಲಿತ ಸಮುದಾಯಗಳಿಗೆ ಘೋರ ಅನ್ಯಾಯವಾಗುತ್ತದೆ. ಒಳ ಮೀಸಲಾತಿ ಜಾರಿ ಮಾಡಬಾರದು ಒಂದು ವೇಳೆ ಮಾಡಿದರೆ ಕೇಂದ್ರ ಮತ್ತು ರಾಜ್ಯ ರ‍್ಕಾರಗಳ ವಿರುದ್ದ ಉಗ್ರ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಈ ಸಂರ‍್ಭದಲ್ಲಿ ಆಲ್ ಇಂಡಿಯಾದ ಬಂಜಾರ ಸೇವಾ ಸಂಘದ ರಾಜ್ಯ ಕೋಶಾಧ್ಯಕ್ಷ ಬಂಜಾರ ಸೇವಾ ಸಂಘದ ಜಿವಲೆಪ್ಪ ನಾಯ್ಕ, ತಾಲೂಕ ಅಧ್ಯಕ್ಷ ಲಾಲಪ್ಪ ರಾಠೋಡ, ಚಂದ್ರು ಗೌಡೂರು ತಾಂಡ, ರಾಜ್ಯ ಉಪಾಧ್ಯಕ್ಷ ಡಾ.ನೀಲಪ್ಪ ಪವಾರ, ವಿರೇಶ ಬೋವಿ, ನಾಗರೆಡ್ಡಿ ರಾಠೋಡ, ದೇವರೆಡ್ಡಿ ಬೋವಿ, ಶಂಕರ ಪವಾರ, ನಿಲೇಶ ಡಿ.ಪವಾರ, ಯಂಕಪ್ಪ ಬೋವಿ ಗೋನವಾಟ್ಲ ತಾಂಡ ಸೇರಿದಂತೆ ಇದ್ದರು.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

error: Content is protected !!
";