ಮಸ್ಕಿ : ತಾಲೂಕಿನ ಗುಡದೂರು, ಕೊಳಬಾಳ, ಗೌಡನಬಾವಿ ಗ್ರಾಮ ಪಂಚಾಯತಿಗೆ ಶುಕ್ರವಾರ ತಾ.ಪಂ. ಸಹಾಯಕ ನರ‍್ದೇಶಕರಾದ (ಗ್ರಾಮೀಣ ಉದ್ಯೋಗ) ಶಿವಾನಂದರಡ್ಡಿ ಭೇಟಿ ನೀಡಿ ವಿವಿಧ ಕಾಮಗಾರಿ ಪರಿಶೀಲಿಸಿದರು.
ಬೇಸಿಗೆ ಅವಧಿಯಲ್ಲಿ ಸ್ಥಳೀಯ ಕೂಲಿಕಾರರ ಬೇಡಿಕೆ ಅನುಸಾರ ಕೂಲಿ ಕೆಲಸ ಒದಗಿಸಿ ಗುಳೆ ತಡೆಯುವಲ್ಲಿ ಗ್ರಾಪಂಗಳ ಪಾತ್ರ ಮಹತ್ವದಾಗಿತ್ತು. ಕೆಲ ದಿನಗಳಿಂದ ತಾಲೂಕಿನಲ್ಲಿ ಮುಂಗಾರು ಮಳೆ ಚುರುಕು ಪಡೆದಿದ್ದು, ಕೂಲಿಕಾರರು ಹೊಲದ ಕೆಲಸಗಳಲ್ಲಿ ನಿರತರಾಗಿದ್ದಾರೆ. ಪ್ರಸಕ್ತ ರ‍್ಷದ ಸಾಮಗ್ರಿ ಕಾಮಗಾರಿಗಳನ್ನು ಕೂಡಲೇ ಆರಂಭಿಸಿ, ಕಾಲಮಿತಿಯೊಳಗೆ ಪರ‍್ಣಗೊಳಿಸಬೇಕು ಎಂದರು.
ಗುಡದೂರು ಗ್ರಾಪಂಯ ಪರಾಪುರದಲ್ಲಿ ನರ‍್ಮಾಣ ಹಂತದಲ್ಲಿರುವ ದನದಶೆಡ್, ಹೈಟೆಕ್ ಟಾಯ್ಲೆಟ್, ಕೊಳಬಾಳ ಗ್ರಾಪಂಯ ಕಣ್ಣೂರಿನ ಸ್ಮಶಾನ ಅಭಿವೃದ್ಧಿ ಕಾಮಗಾರಿ, ಕೊಳಬಾಳದ ಸಿಸಿ ರಸ್ತೆ, ಹೈಟೆಕ್ ಟಾಯ್ಲೆಟ್, ಗೌಡನಬಾವಿಯ ಸಿಸಿ ರಸ್ತೆ ಪರಿಶೀಲಿಸಿದರು. ಈ ವೇಳೆ ಗುಡದೂರು ಗ್ರಾಪಂ ಪಿಡಿಒ ಮಲ್ಲಯ್ಯ, ತಾಂತ್ರಿಕ ಸಂಯೋಜಕರಾದ ಅಶೋಕ್, ತಾಂತ್ರಿಕ ಸಹಾಯಕ ಅಭಿಯಂತರರಾದ ರಾಘವೇಂದ್ರ, ಬಿಎಫ್ಟಿಗಳು ಇತರರಿದ್ದರು.