ದೇವದುರ್ಗ : ಸಮೀಪದ ಅರಕೇರಾ ತಾಲೂಕಿನ ಭೂಮನಗುಂಡ ಗ್ರಾಮದಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಉಂಟಾಗಿದೆ. ಗ್ರಾಪಂ ಆಡಳಿತ ಮಂಡಳಿ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ ನೇತೃತ್ವದಲ್ಲಿ ಗ್ರಾಮಸ್ಥರು ಗ್ರಾಪಂ ಮುಂದೆ ಖಾಲಿ ಕೊಡ ಹಿಡಿದುಕೊಂಡು ಪ್ರತಿಭಟಿಸಿ ಪಿಡಿಒಗೆ ಮನವಿ ಸಲ್ಲಿಸಿದರು. ೩೮ ಲಕ್ಷ ರೂ. ವೆಚ್ಚದಲ್ಲಿ ಕುಡಿಯುವ ನೀರಿನ ಕಾಮಗಾರಿ ಪೂರ್ಣಗೊಂಡಿದೆ. ಆದರೂ ನೀರು ಪೂರೈಕೆಯಲ್ಲಿ ಸಮಸ್ಯೆ ಎದುರಾಗಿದೆ. ನಿತ್ಯ ಕುಡಿಯುವ ನೀರಿಗೆ ಎಲ್ಲೆಂದರಲ್ಲಿ ಅಲೆಯಬೇಕಾಗಿದೆ. ಇದರಿಂದಾಗಿ ಹಲವು ಸಮಸ್ಯೆಗಳು ಎದುರಿಸುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಬೆಳಿಗ್ಗೆ ಮತ್ತು ಸಂಜೆ ಮೂರು ತಾಸು ನೀರು ಪೂರೈಸಬೇಕು. ವಾಟರ್ ಮ್ಯಾನ್ ಸಮಸ್ಯೆಯನ್ನು ಬಗೆಹರಿಸಬೇಕು. ಓವರ್ ಟ್ಯಾಂಕ್ ಮೂಲಕ ನೀರು ಪೂರೈಸಲು ಕ್ರಮವಹಿಸಬೇಕು. ಒಂದೊಮ್ಮೆ ತ್ರೀವ ನೀರಿನ ಸಮಸ್ಯೆ ಉಂಟಾದಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸಬೇಕು. ಗ್ರಾಪಂಯ ೧೪ಮತ್ತು ೧೫ನೇ ಹಣಕಾಸು ಯೋಜನೆಯ ಅನುದಾನ ಕುಡಿಯುವ ನೀರಿಗೆ ಬಳಿಕೆ ಮಾಡಬೇಕು. ಭೂಮನಗುಂಡ ಗ್ರಾಮದಲ್ಲಿ ಶಾಶ್ವತ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಹರಿಸಬೇಕು. ಇಲ್ಲಿನ ಸಮಸ್ಯೆ ಕುರಿತು ಹಲವು ಬಾರಿ ಗ್ರಾಪಂ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಆದರೂ ಇಲ್ಲಿವರೆಗೆ ಯಾವುದೇ ಪ್ರಯೋಜನೆಯಾಗಿಲ್ಲ. ಇನ್ನಾದರೂ ಗ್ರಾಮಕ್ಕೆ ಶಾಶ್ವತ ನೀರು ಪೂರೈಸಲು ಗ್ರಾಪಂ ಆಡಳಿತ ಮಂಡಳಿ ನಿಗಾವಹಿಸಬೇಕು ಎಂದು ಮನವಿ ಪತ್ರದಲ್ಲಿ ಆಗ್ರಹಿಸಿದರು. ಇದೇ ಸಂದರ್ಭದಲ್ಲಿ ಮಲ್ಲನಗೌಡ ಅಂಚೆಸೂಗೂರು, ದುರುಗಣ್ಣ, ಭೂಮನಗುಂಡ, ಹುಲಿಗೆಪ್ಪ, ಶಿವಪ್ಪ, ಹನುಮೇಶ, ಹನುಮಯ್ಯ, ಬಾಲಮ್ಮ, ಮಲ್ಲಮ್ಮ, ಲಕ್ಷಿö್ಮÃ, ಈರಣ್ಣ ಸೇರಿದಂತೆ ಇತರರು ಇದ್ದರು.