ಜಿಲ್ಲೆಯ ಕೀರ್ತಿ ಹೆಚ್ಚಿಸಿದ ಅಂಕಿತಾಗೆ ಡಿಸಿ, ಸಿಇಓ ಅಭಿನಂಧನೆ
ಬಾಗಲಕೋಟೆ,ಮೇ .೦9 : 2023-24ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯ ಫಲಿತಾಂಶ ಗುರುವಾರ ಪ್ರಕಟಗೊಂಡಿದ್ದು, ಜಿಲ್ಲೆಯ ಅಂಕಿತಾ ಕೊಣ್ಣೂರ 625 ಕ್ಕೆ 625 ಅಂಕ ಪಡೆಯುವ ಮೂಲಕ ಇಡೀ ರಾಜ್ಯಕ್ಕೆ ಮೊದಲ ಸ್ಥಾನ ಪಡೆದುಕೊಂಡಿದ್ದು, ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಹಾಗೂ ಜಿಲ್ಲಾ ಪಂಚಾಯತ ಸಿಇಓ ಶಶಿಧರ ಕುರೇರ ಅಭಿನಂಧನೆ ಸಲ್ಲಿಸಿದ್ದಾರೆ.
ಜಿಲ್ಲೆಯ ಮುಧೋಳ ತಾಲೂಕಿನ ವಜ್ರಮಟ್ಟಿ ಗ್ರಾಮದ ಬಸಪ್ಪ ಮತ್ತು ಗೀತಾ ದಂಪತಿಗಳ ಮಗಳಾದ ಅಂಕಿತಾ ಕೊಣ್ಣೂರ ಸ್ವ-ಗ್ರಾಮದಲ್ಲಿ 1 ನೇ ತರಗತಿಯಿಂದ 5 ತರಗತಿವರೆಗೆ ಎಲ್.ಕೆ.ಮೆಮೋರಿಯಲ್ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾಬ್ಯಾಸ ಮಾಡಿ, ನಂತರ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಮೂಲಕ ಮೆಳ್ಳಿಗೇರಿ ಮೊರಾರ್ಜಿ ದೇಸಾಯಿ ಶಾಲೆಗೆ ಪ್ರವೇಶ ಪಡೆದು 6 ರಿಂದ ೧೦ನೇ ತರಗತಿವರೆಗೆ ವಿದ್ಯಾಬ್ಯಾಸ ಮಾಡಿದ್ದಾರೆ. ಪ್ರಾರಂಭದಿAದಲೂ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ಅಂಕಿತಾ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 625ಕ್ಕೆ625 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆಯುವ ಮೂಲಕ ಬಾಗಲಕೋಟೆಯ ಕೀರ್ತಿ ಹೆಚ್ಚಿಸಿದ್ದಾರೆ.
ರಾಜ್ಯಕ್ಕೆ ಟಾಪರ್ ಸ್ಥಾನ ಪಡೆದ ಮಾತನಾಡಿದ ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಅವರು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆಯುವ ಮೂಲಕ ಜಿಲ್ಲೆಯ ಪ್ರತಿಷ್ಠೆಂiÀiನ್ನು ಹೆಚ್ಚಿಸಿದ್ದು, ಅವಳ ಈ ಸಾಧನೆಗೆ ಜಿಲ್ಲಾಡಳಿತ ಎಲ್ಲರ ಪರವಾಗಿ ಹುತ್ಪೂರಕ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು. ಕುಮಾರಿ ಅಂಕಿತಾ ಎಲ್ಲ ಮಕ್ಕಳಿಗೆ ಮಾದರಿಯಾಗಿದ್ದು, ಇವಳ ಸ್ಪೂರ್ತಿ 8ನೇ ಹಾಗೂ 9ನೇ ತರಗತಿ ಈ ವರ್ಷ ಎಸ್.ಎಸ್.ಎಲ್.ಸಿ ಬರುವ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದೆ ಎಂದರು.
ಅವಳ ಮುಂದಿನ ಭವಿಷ್ಯ ಹಾಗೂ ಉತ್ತಮ ಶಿಕ್ಷಣಕ್ಕಾಗಿ ಜಿಲ್ಲಾಡಳಿತ ಎಲ್ಲ ರೀತಿಯ ಸಹಕಾರ ನೀಡಲಾಗುತ್ತಿದೆ. ಅಳವ ಮುಂದಿನ ವಿದ್ಯಾಬ್ಯಾಸ ಕೂಡಾ ಇದೇ ರೀತಿ ಅಗ್ರಮಾನ್ಯವಾಗಿರಲಿ. ಅವಳ ಕನಸು ಕನಸು ನನಸು ಮಾಡಲು ಪ್ರಯತ್ನ ಇದೇ ರೀತಿ ಸಾಗಲಿ. ಇನ್ನುಳಿದ ವಿದ್ಯಾರ್ಥಿಗಳು ಕೂಡಾ ಅವಳನ್ನು ಸ್ಪೂರ್ಥಿಯಾಗಿ ಪಡೆದು ಸಾಧನೆ ಮಾಡಿ ಉನ್ನತ ಮಟ್ಟದ ಸ್ಥಾನ ಪಡೆಯಲು ಆಶಿಸಿದರು. ಜಿಲ್ಲೆಗೆ ಉತ್ತಮ ಫಲಿತಾಂಶ ತಂದುಕೊಡುವಲ್ಲಿ ಶ್ರಮಿಸಿದ ಅಧಿಕಾರಿ ಹಾಗೂ ಶಿಕ್ಷಕವೃಂದಕ್ಕೆ ಅಭಿನಂಧಿಸಿದರಲ್ಲದೇ ಅನುತ್ತೀರ್ಣಗೊಂಡ ವಿದ್ಯಾರ್ಥಿಗಳು ದೃತಿಗೆಡದೇ ಬರುವ ಪರೀಕ್ಷೆ-೨ರಲ್ಲಿ ಉತ್ತಮ ಸಾಧನೆ ಮಾಡಲು ತಿಳಿಸಿದರು.