ತ್ಯಾಜ್ಯಗಳಿಂದ ಕೂಡಿದ ಅಂಗನವಾಡಿ ಕೇಂದ್ರ, ಹರಿಜನವಾಡ ಶಾಲೆಯ ರಸ್ತೆಗಳು

Eshanya Times

ತುರ್ವಿಹಾಳ: ಗ್ರಾಮೀಣ ಪ್ರದೇಶಗಳಲ್ಲಿ ಮಕ್ಕಳಿಗೆ ಮೊದಲು ಅಕ್ಷರ ಕಲಿಕೆ ಶುರುವಾಗುವುದು ಅಂಗನ
ವಾಡಿ ಕೇಂದ್ರಗಳಿ0ದ ಅದರೆ ಪಟ್ಟಣದಲ್ಲಿನ ಅಂಗನ ವಾಡಿ ಕೇಂದ್ರ ಹಾಗೂ ಶಾಲೆಗಳಿರುವ ರಸ್ತೆಯಲ್ಲಿಯೇ ತ್ಯಾಜ್ಯ ಶೆಕರಣೆಯಿಂದ ಯಿಂದ ಬೆಸತ್ತಿರುವ ಪಾಲಕರು ಮಕ್ಕಳನ್ನು ಅಂಗವಾಡಿ ಹಾಗೂ ಶಾಲೆಗೆ ಕಳುಹಿಸಲು ಹರಸಾಹಸ ಪಡಬೇಕಿದೆ.
ಪಟ್ಟಣದ ವಾರ್ಡ್ ನಂ.06 ರಲ್ಲಿನ ಅಂಗನವಾಡಿ ಕೇಂದ್ರದ ಸುತ್ತಲು ಮುಳ್ಳಿನ ಗಿಡಗಳು ಹಾಗೂ ರಸ್ತೆಯಲ್ಲಿ ಕಲ್ಲು, ಇಟ್ಟಿಗೆ, ಸೇರಿದಂತೆ ಮುಖ್ಯರಸ್ತೆಯಲ್ಲಿ ಅನೇಕ ತ್ಯಾಜ್ಯಗಳಿಂದ ರಸ್ತೆಯಿಲ್ಲದೇ ನಿತ್ಯ ಪರದಾಡುವಂತ ಸಮಸ್ಯ ಎದುರಾಗಿದೆ.
ಕೇಂದ್ರದ ಮುಂಬಾಗದಲ್ಲಿಯೇ ಮಲ-ಮೂತ್ರ ವಿಸರ್ಜನೆಯಿಂದಾಗಿ ದುರ್ನಾತವಾಗಿ ಮಾರ್ಪಟ್ಟಿದ್ದು, ಇದರಿಂದ ಅನೇಕ ರೋಗಗಳಿಗೆ ಚಿಕ್ಕ ಮಕ್ಕಳು ತುತ್ತಾಗುವ ಭಯವು ಪಾಲಕರಲ್ಲಿ ಕಾಡುತ್ತಿದೆ,ಅಂಗನವಾಡಿ ಕೇಂದ್ರದಲ್ಲಿ ಮೂಲಭುತ ಸೌಕರ್ಯ
ಗಳಾದ ವಿದ್ಯುತ್, ನೀರು, ರಸ್ತೆ ಸೇರಿದಂತೆ ಅನೇಕ ಸಮಸ್ಯೆಳಿದ್ದು ಇದರ ಬಗ್ಗೆ ಅಧಿಕರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನೆಗಿಲ್ಲ, ಎಂದು ಸ್ಥಳೀಯರು ಗಂಭೀರವಾಗಿ ಅರೋಪಿಸಿದ್ದಾರೆ.
ಪಟ್ಟಣದ ವಾರ್ಡ್ ನಂ 3 ರಲ್ಲಿನ ಹರಿಜವಾಡ ಶಾಲೆಯ ಅಕ್ಕ ಪಕ್ಕದ ರಸ್ತೆಗಳ ಮೇಲೆ ರಾಶಿ ರಾಶಿ ತ್ಯಾಜ್ಯ, ಮಲ ಮೂತ್ರ ವಿಸರ್ಜನೆ,ಚರಂಡಿಗಳು ತುಂಬಿ ಹರಿಯುತ್ತಿದ್ದರು,ಪೌರ ಕಾರ್ಮಿಕರು,ಅವರ ಮೆಲಾಧಿಕಾರಿಗಳು ಸ್ವಚ್ಛತೆಗಾಗಿ ಕೆಲವು ಮುಖ್ಯ ರಸ್ತೆ ಗಳು ಮತ್ತು ಕೆಲವು ವಾರ್ಡಗಳನ್ನು ದತ್ತು ತೆಗೆದುಕೊಂಡವರAತೆ, ವರ್ತಿಸುತ್ತಿರುವುದು ವಿಪರ್ಯಾಸದ ಸಂಗತಿಯೇ ಸರಿ ಎಂದು ಸದಸ್ಯರು ಸಾರ್ವಜನಿಕರು,ಪತ್ರಿಕೆಯ ಮುಂದೆ ಬೆಸರ ವ್ಯಕ್ತಪಡಿಸಿದರು.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

error: Content is protected !!
";