ರಾಯಚೂರು.ಜೂ೩: ಜಮೀನುಗಳಲ್ಲಿ ತರಕಾರಿ ಬೆಳೆದು ನಗರಕ್ಕೆ ಮಾರಾಟ ಮಾಡಲು ಬರುವ ರೈತರಿಗೆ ನಗರದ ಮಾರುಕಟ್ಟೆಯಲ್ಲಿ ತರಕಾರಿ ಮಾರಾಟ ಮಾಡಲು ಸೂಕ್ತ ವ್ಯವಸ್ಥೆ ಕಲ್ಪಿಸಬೇಕೆಂದು ಸಾಮಾಜಿಕ ಹೋರಾಟಗಾರ ಅಂಬಾಜೀರಾವ್ ಒತ್ತಾಯಿಸಿದ್ದಾರೆ.
ಪ್ರತಿನಿತ್ಯ ರಾಯಚೂರು ತಾಲೂಕು ವ್ಯಾಪ್ತಿಯ ನೂರಾರು ರೈತರು ತಮ್ಮ ಜಮೀನುಗಳಲ್ಲಿ ಬೆಳೆಯುವ ವಿವಿಧ ತರಕಾರಿಗಳನ್ನು ಮಾರಾಟ ಮಾಡಲು ನಗರ ಪ್ರದೇಶಕ್ಕೆ ಬರುತ್ತಿದ್ದಾರೆ. ತಮ್ಮ ಜೀವನ ನಿರ್ವಹಣೆಗೆ ತರಕಾರಿ ಮಾರಾಟವನ್ನು ಅವಲಂಬಿಸಿದ್ದಾರೆ. ಆದರೆ ಅವರು ನಗರದಲ್ಲಿ ತರಕಾರಿ ಮಾರಾಟ ಮಾಡುವ ಸ್ಥಳದಲ್ಲಿ ಯಾವುದೇ ಸೂಕ್ತ ವ್ಯವಸ್ಥೇ ಇಲ್ಲ ಎಂದು ಅಂಬೋಜಿ ರಾವ್ ಆರೋಪಿಸಿದ್ದಾರೆ.
ಈ ರೈತರು ತರಕಾರಿ ಮಾರಾಟ ಮಾಡುವ ಜಾಗದಲ್ಲಿ ಮಳೆ ಬಂದರೆ ನೀರು ನಿಲ್ಲುವುದರಿಂದ ವ್ಯಾಪಾರಕ್ಕೆ ತೀವ್ರ ಅಡಚಣೆ ಉಂಟಾಗುತ್ತಿದೆ. ರಾಯಚೂರ ನಗರ ಸಭೆ ಅಧಿಕಾರಿಗಳಿಗಳು ಇದ್ದನ್ನು ಗಂಭೀರವಾಗಿ ಪರಿಗಣಿಸಿ ಹಳ್ಳಿಗಳಿಂದ ತರಕಾರ ಮಾರಾಟಕ್ಕೆ ಬರುವ ರೈತರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕಿದೆ ಎಂದು ಒತ್ತಾಯಿಸಿರು ಅಂಬೋಜಿ ಅವರು ಬೀದಿ ಬದಿಯ ಅಥಾವ ನಗರ ಪ್ರದೇಶಗಳಲ್ಲಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವ ಹಕ್ಕು ಬೆಳೆಗಾರರಿಗಿದೆ ಎಂದು ಅವರು ತಿಳಿಸಿದ್ದಾರೆ.
ಉಳಿದಂತೆ ನಗರದಲ್ಲಿವ ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸಬೇಕು, ಮತ್ತು ಅಂತಹ ಪ್ರದೇಶಗಳಲ್ಲಿ ಬಡ ರೈತರಿಗೆ ತರಕಾರಿ ಮಾರಾಟಕ್ಕ ವ್ಯವಸ್ಥೆ ಕಲ್ಪಿಸಬೇಕು ಒತ್ತುವರಿ ಆದ ರಾಜ ಕಾಲುವೆ ಜಾಗಗಳು ತೆರವುಗೊಳಿಸಿ, ನಗರದ ಮುಖ್ಯ ರಸ್ತೆಗಳಲ್ಲಿ ಬೀದಿ ದೀಪಗಳು ಅಳವಡಿಸಿ ಪ್ರತಿಯೊಂದು ವಾರ್ಡ್ಗಳಲ್ಲಿ ಮಳೆ ನೀರು ನಿಲ್ಲದೆ ಸುಗಮವಾಗಿ ಹರಿಯಲು ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ನಗರ ಸಭೆ ಆಯುಕ್ತರು ನೀತಿ ಸಂಹಿತೆ,ನೆಪದಲ್ಲಿ ಕರ್ತವ್ಯದಿಂದ ಜಾರಿಕೊಳ್ಳುತ್ತಿದ್ದಾರೆ ಚುನಾವಣೆ, ನೀತಿ ಸಂಹಿತೆಯಿAದ ನಗರ ಸ್ವಚ್ಛತೆಗೆಗಾಗಿ ಹಾಗೂ ಅನಧಿಕೃತ ಕಟ್ಟಡ ಗಳನ್ನು ತೆರವುಗೊಳಿಸಲು ಏನು ಸಂಬAಧ ಎಂದು ಅರ್ಥ ಅವರೇ ಹೇಳಬೇಕಿದೆ ಏನಾದರೂ ಒಳ್ಳೆ ಕೆಲಸ ಮಾಡಿ ತಮ್ಮ ಹೆಸರು ನಗರದ ಜನರು ನೆನಪಿಸಿಕೊಳ್ಳುವ ತರಹ ಕೆಲಸ ಮಾಡಿ ಎಂದು ಅಂಬಾಜೀ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.
ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜೀರಾವ್ ಒತ್ತಾಯ
