ಅಫಜಲಪುರ: ಬಿಜೆಪಿಯವರು ಅಧಿಕಾರಕ್ಕೆ ಬರುವ ೧೦ ರ‍್ಷಗಳ ಹಿಂದೆ ಅವರು ನೀಡಿದ ಭರವಸೆ, ಜನರ ಎದುರು ಆಡಿದ ಮಾತುಗಳು ಹಾಗೂ ಅವರು ಕೊಟ್ಟ ಅಚ್ಛೇ ದಿನದ ಭರವಸೆಗಳು ಮತ್ತು ಮೋದಿ ಆಡಳಿತದಲ್ಲಿ ಮಾಡಿದ ಕೃತಿಗೂ ತದ್ವಿರುದ್ಧವಾಗಿದೆ ಎಂದು ದಲಿತ ಸಂರ‍್ಷ ಸಮಿತಿಗಳ ಐಕ್ಯ ಹೋರಾಟ ಚಾಲನಾ ಸಮಿತಿಯ ರಾಜ್ಯ ಸಂಚಾಲಕ ರ‍್ಜುನ ಭದ್ರೆ ತಿಳಿಸಿದರು.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿ ಅವಧಿಯಲ್ಲಿ ಉದಾರೀಕರಣ, ಖಾಸಗೀಕರಣ ಮತ್ತು ಜಾಗತೀಕರಣ ನೀತಿಗಳನ್ನು ಹಾಗೂ ಬಂಡವಾಳಗಾರರ ವಿದೇಶಿ ಬಹುರಾಷ್ಟ್ರೀಯ ಕಂಪನಿಗಳ ಪರವಾದ ತನ್ನ ನೀತಿಗಳನ್ನು ಜಾರಿಗೆ ತರಲು ಬಿಜೆಪಿ ಶತ ಪ್ರಯತ್ನ ಮಾಡಿ ಅದರಲ್ಲಿ ಸಾಕಷ್ಟು ಯಶಸ್ಸು ಕಂಡಿದೆ.
ಪ್ರಮುಖವಾಗಿ ಅಂಬಾನಿ, ಅದಾನಿ ಮುಂತಾದ ದೈತ್ಯ ಕರ‍್ಪೊರೇಟರ್ ಗಳಿಗೆ ಅನುಕೂಲಕರವಾದ ನೀತಿ ಹಾಗೂ ಕ್ರಮಗಳನ್ನು ಜಾರಿ ಮಾಡಿದೆ. ಇದರಿಂದ ಅಂಬಾನಿ, ಅದಾನಿ ಅವರಂತಹ ಉದ್ಯಮಿದಾರರಿಗೆ ಅಚ್ಛೇ ದಿನ್ ಬಂದಿದೆ ಹೊರತು ರೈತರು ಹಾಗೂ ಜನಸಾಮಾನ್ಯರಿಗಲ್ಲ. ಹೀಗಾಗಿ ಜನರ ಸಂಕಷ್ಟಗಳನ್ನು ಆಲಿಸಿ ಅವರ ರ‍್ಥಿಕ ಭದ್ರತೆಗೆ ಮುಂದಾಗುವ ಕಾಂಗ್ರೆಸ್ಸಿನ ಜನಪರ ನಿಲುವು ಎಲ್ಲರಿಗೂ ತಿಳಿದ ವಿಷಯವಾಗಿದೆ. ಹೀಗಾಗಿ ಭವ್ಯ ಭಾರತದ ರಕ್ಷಣೆಗಾಗಿ ಹಾಗೂ ಸಂವಿಧಾನದ ಉಳಿವಿಗಾಗಿ ಈ ಬಾರಿ ಕಲಬುರಗಿ ಕಾಂಗ್ರೇಸ್ ಲೋಕಸಭಾ ಅಭ್ರ‍್ಥಿ ರಾಧಾಕೃಷ್ಣ ದೊಡ್ಡಮನಿ ಅವರಿಗೆ ತಮ್ಮ ಅತ್ಯಮೂಲ್ಯ ಮತ ಚಲಾಯಿಸುವ ಮೂಲಕ ಈ ಭಾಗದ ಅಭಿವೃದ್ಧಿಗೆ ಮುಂದಾಗಬೇಕು ಎಂದು ಮನವಿ ಮಾಡಿದರು.
ಈ ಸಂರ‍್ಭದಲ್ಲಿ ಮುಖಂಡರಾದ ಮಹಾಂತೇಶ ಬಡದಾಳ, ಕಪಿಲ ಸಿಂಗೆ, ಭೀಮರಾವ ಗೌರ, ಮರೆಪ್ಪ ಮುಗಳಿ ಉಪಸ್ಥಿತರಿದ್ದರು.