ಔರಾದ್: ಹುಬ್ಬಳ್ಳಿಯ ವಿದ್ಯರ‍್ಥಿನಿ ನೇಹಾ ಹಿರೇಮಠ ಅವರ ಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಹಾಗೂ ಆರೋಪಿ ಫಯಾಜ್‌ಗೆ ಗಲ್ಲು ಶಿಕ್ಷೆ ನೀಡುವಂತೆ ಅಖಿಲ ಭಾರತೀಯ ವಿದ್ಯರ‍್ಥಿ ಪರಿಷತ್ ಔರಾದ್ ನಗರದಲ್ಲಿ ಸಹಿ ಸಂಗ್ರಹ ಅಭಿಯಾನ ಮಾಡಲಾಯಿತು.
ಹುಬ್ಬಳ್ಳಿಯ ಬಿವಿಬಿ ಕಾಲೇಜಿನ ಎಂಸಿಎ ವಿದ್ಯರ‍್ಥಿನಿ ನೇಹಾ ಹಿರೇಮಠರವರ ಭೀಕರ ಹತ್ಯೆಯನ್ನು ಖಂಡಿಸಿ ಹಾಗೂ ಆರೋಪಿ ಪಯಾಜ್ ನನ್ನು ಗಲ್ಲಿಗೇರಿಸಬೇಕು ಹಾಗೂ ಈ ತನಿಖೆಯನ್ನು ಸಿಬಿಐ ಗೆ ಹಸ್ತಾಂತರ ಮಾಡಬೇಕೆಂದು ಆಗ್ರಹಿಸಿ ಅಖಿಲ ಭಾರತೀಯ ವಿದ್ಯರ‍್ಥಿ ಪರಿಷತ್ ವತಿಯಿಂದ ರಾಜ್ಯಾದ್ಯಂತ ಸಹಿ ಸಂಗ್ರಹ ಅಭಿಯಾನಕ್ಕೆ ಕರೆ ನೀಡಲಾಗಿದೆ ಎಂದು ಎಬಿವಿಪಿ ಜಿಲ್ಲಾ ಸಂಚಾಲಕರಾದ ಶಶಿಕಾಂತ್ ರಾಕ್ಲೆ ಮಾತನಾಡಿದರು.
ನೇಹಾ ಹಿರೇಮಠ ಅವರ ಹತ್ಯೆಯಾದ ದಿನದಿಂದ ರಾಜ್ಯ ರ‍್ಕಾರ ನಡೆದುಕೊಳ್ಳುತ್ತಿರುವ ರೀತಿ ನೋಡಿದರೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸದೆ ರಾಜ್ಯದ ಮುಖ್ಯಮಂತ್ರಿಗಳು ಮತ್ತು ಗೃಹ ಸಚಿವರು ಬೇಜವಾಬ್ದಾರಿ ಹೇಳಿಕೆಗಳನ್ನ ನೀಡಿತ್ತಿದ್ದರು, ಎಬಿವಿಪಿ ಹಾಗು ಇತರ ಸಂಘಟನೆಗಳು ಬೃಹತ್ ಹೋರಾಟ ನಡೆಸಿ ರ‍್ಕಾರದ ಮೇಲೆ ಒತ್ತಡ ತಂದಾಗ ಈ ಪ್ರಕರಣವನ್ನು ತಮ್ಮದೇ ಹಿಡಿತದಲ್ಲಿರುವ ಸಿಐಡಿ ಗೆ ವಹಿಸಿ ಪ್ರಕರಣವನ್ನು ದಾರಿ ತಪ್ಪಿಸುವ ಕೆಲಸವನ್ನ ರಾಜ್ಯ ರ‍್ಕಾರ ಮಾಡುತ್ತಿರುವುದು ಕಂಡುಬರುತ್ತದೆ. ಈ ಪ್ರಕರಣದ ಹಿಂದೆ ಲವ್ ಜಿಹಾದ್ ನಂತಹ ಷಡ್ಯಂತರ ಇರುವುದು ಗೋಚರವಾಗುತ್ತಿದೆ, ಕಾರಣ ಸರಕಾರ ಈ ಪ್ರಕರಣದ ಹಿಂದೆ ಇರುವ ಜಾಲವನ್ನು ಭೇದಿಸುವ ನಿಟ್ಟಿನಲ್ಲಿ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಗಲ್ಲು ಶಿಕ್ಷೆ ಆಗುವ ರೀತಿಯಲ್ಲಿ ಪ್ರಕರಣವನ್ನು ತೆಗೆದುಕೊಂಡು ಹೋಗುವಂತೆ ಆಗ್ರಹಿಸಿ ಸಹಿ ಸಂಗ್ರಹ ಅಭಿಯಾನಕ್ಕೆ ಕರೆ ನೀಡಲಾಗಿದೆ. ಸಂಗ್ರಹಿಸಿದ ಸಹಿಗಳನ್ನ ರಾಜ್ಯದ ರಾಜ್ಯಪಾಲರಿಗೆ ಮತ್ತು ರಾಷ್ಟ್ರಪತಿಗಳಿಗೆ ಕಳುಹಿಸಿಕೊಡಲಾಗುವುದು ಈ ಸಂರ‍್ಭದಲ್ಲಿ
ಇಕ್ರ ಪಿಯು ಕಾಲೇಜಿನ ಪ್ರಾಂಶುಪಾಲರಾದ ಗಾಜಿಅಲಿ ಬೇಗ, ಎಬಿವಿಪಿ ಜಿಲ್ಲಾ ಸಂಚಾಲಕ್ ಶಶಿಕಾಂತ್ ರಾಕ್ಲೆ,ಎಬಿವಿಪಿ ಹಿರಿಯರಾದ ಅಶೋಕ್ ಶಂಭಳಿ, ಹೇಮಂತ್ ಸಂಘಟನ ಕರ‍್ಯರ‍್ಶಿ,ರಾಹುಲ್ ಮಲ್ಲಿಕರ‍್ಜುನ,ಅನಿಲ್ ಮೆತ್ರೆ ನಾಗಮ್ಮ ಪೂಜಾ ನೂರಾರು ವಿದ್ಯರ‍್ಥಿಗಳಿದ್ದರು.