ಮಾನ್ವಿ,: ಮಾನ್ವಿ ತಾಲೂಕಿನ ಕಪಗಲ್ ಗ್ರಾಮದ ಬಳಿ ಗುರುವಾರ ಬೆಳಿಗ್ಗೆ ೯.ಗಂ.ಸಮಯದಲ್ಲಿ ಕೆಎಸ್ಆರ್ ಟಿಸಿ ಬಸ್ ಹಾಗೂ ಲೊಯೊಲಾ ಶಾಲಾ ಬಸ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಇಬ್ಬರು ವಿದ್ಯಾರ್ಥಿಗಳಾದ ಸಮರ್ಥ, ಶ್ರೀಕಾಂತ ಸಾವನ್ನಪ್ಪಿದ್ದು, ಭೀಕರ ಅಪಘಾತದಲ್ಲಿ ಮೂವರು ವಿದ್ಯಾರ್ಥಿಗಳು ಕೈ, ಕಾಲು ಛಿದ್ರಗೊಂಡಿವೆ. ೩೨ ವಿದ್ಯಾರ್ಥಿಗಳು, ಬಸನಲ್ಲಿದ್ದ ಅನೇಕ ಪ್ರಯಾಣಿಕರು ಗಾಯಗೊಂಡಿರುವ ದುರ್ಘಟನೆ ಜರುಗಿದೆ.
೩೨ ಜನರ ಪೈಕಿ ೧೮ ಗಾಯಾಳುಗಳಿಗೆ ರಿಮ್ಸ್ ಆಸ್ಪತ್ರೆಯಲ್ಲಿ ಮತ್ತು ೧೪ ವಿದ್ಯಾರ್ಥಿಗಳಿಗೆ ರಾಯಚೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಭೀಕರ ಅಪಘಾತದಲ್ಲಿ ಮೂವರು ವಿದ್ಯಾರ್ಥಿಗಳು ಕೈ, ಕಾಲು ಛಿದ್ರಗೊಂಡಿವೆ. ಪೋಷಕರು ಘಟನೆ ನಡೆದ ಸ್ಥಳಕ್ಕೆ ಬಂದು ರೋಧಿಸಿದ್ದಾರೆ. ಮಕ್ಕಳ ಪರಿಸ್ಥಿತಿ ನೋಡಿ ಬಿಕ್ಕಿ ಬಿಕ್ಕಿ ಅತ್ತಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.
ಆಸ್ಪತ್ರೆಯತ್ತ ಮಕ್ಕಳ ಪೋಷಕರು ಆಗಮಿಸುತ್ತಿದ್ದು, ಐಸಿಯುನಲ್ಲಿ ಮಕ್ಕಳನ್ನ ತೋರಿಸುವಂತೆ ಪೋಷಕರು ಪಟ್ಟು ಹಿಡಿದಿದ್ದಾರೆ. ಈ ವೇಳೆ ಪೊಲೀಸರು ಮತ್ತು ಪೋಷಕರೊಂದಿಗೆ ವಾಗ್ವಾದ ಉಂಟಾಗಿದೆ. ಸದ್ಯ ರಿಮ್ಸ್ ಆಸ್ಪತ್ರೆಯಲ್ಲಿ ಗಾಯಾಳು ಮಕ್ಕಳಿಗೆ ಚಿಕಿತ್ಸೆ ಮುಂದುವರೆದಿದ್ದು, ಚಿಕಿತ್ಸೆ ಸ್ಪಂದಿಸುತ್ತಿರುವ ಮಕ್ಕಳಿನ್ನು ವಾರ್ಡ್ಗಳಿಗೆ ಶಿಫ್ಟ್ ಮಾಡಲಾಗಿದ್ದು, ಕೆಲವರನ್ನು ಐಸಿಯುಗೆ ಶಿಫ್ಟ್ ಮಾಡಲಾಗಿದೆ.
ಮೃತ ವಿದ್ಯಾರ್ಥಿಗಳ ಕುಟುಂಬಕ್ಕೆ ತಲಾ ೫ ಲಕ್ಷ ರೂ. ಪರಿಹಾರ:-
ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ಡಿಸಿ ಕೆ.ನಿತೇಶ್ ಮಾಧ್ಯಮದವರೊಂದಿಗೆ ಮಾತನಾಡಿದ್ದು, ಜಿಲ್ಲೆಯ ಮಾನ್ವಿ ತಾಲೂಕಿನ ಕಪಗಲ್ ಗ್ರಾಮ ಸಮೀಪ ನಡೆದಿದ್ದ ಅಪಘಾತ ಸಂಭವಿಸಿದೆ. ಮೃತ ವಿದ್ಯಾರ್ಥಿಗಳ ಕುಟುಂಬಕ್ಕೆ ತಲಾ ೫ ಲಕ್ಷ ರೂ. ಪರಿಹಾರ ನೀಡಲು ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ಗಾಯಗೊಂಡ ಮಕ್ಕಳ ಚಿಕಿತ್ಸೆಗೆ ತಲಾ ೩ ಲಕ್ಷ ರೂ. ನೆರವು ನೀಡಲಾಗುತ್ತಿದೆ ಎಂದಿದ್ದಾರೆ.
ಗಾಯಾಳುಗಳಿಗೆ ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.
ಘಟನೆ : ಲೊಯೊಲಾ ಶಾಲಾ ವಾಹನವು ಮಾನವಿ ಪಟ್ಟಣದಲ್ಲಿನ ಶಾಲೆಗೆ ಮಕ್ಕಳನ್ನು ಕರೆದುಕೊಂಡು ಶಾಲೆಗೆ ತೆರಳುತ್ತಿದ್ದ ಶಾಲಾ ವಾಹನಕ್ಕೆ ಮಾನವಿಯಿಂದ ರಾಯಚೂರು ಕಡೆಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಮುಖಾಮುಖಿ ಡಿಕ್ಕಿಯಾಗಿದೆ ಪರಿಣಾಮ ಮೂರು ಜನ ವಿದ್ಯಾರ್ಥಿ ಗಳ ಕಾಲು ಮುರಿದು ಇಬ್ಬರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಮಾನವಿ ಪೋಲಿಸ್ ಠಾಣೆ ಪೋಲಿಸರು ಹಾಗೂ ಸ್ಥಳೀಯರ ಸಹಕಾರದಿಂದ ವಿದ್ಯಾರ್ಥಿ ಗಳನ್ನು ಚಿಕಿತ್ಸೆಗಾಗಿ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಮಾನವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಾಯಳುಗಳನ್ನು, ಹೃತಿಕ್, ಪ್ರಭಾಸ್, ರಂಜೀತ್, ತರುಣ, ಅಭಿನವ, ಮಂಜುನಾಥ್, ಸಾತ್ವಿಕ್, ಮೇಘನ, ಶ್ರೀವಂತ್, ಕಿರ್ತನ, ನಂದೀಶ್, ನಂದೀಶ್, ಫರಹಾನ್, ಮಧುಶ್ರೀ, ನಿಶಾಹಖಾನ, ಶೋಯೆಬ್ ಖಾನ್ ಅನೇಕ ವಿದ್ಯಾರ್ಥಿಗಳಿದ್ದು ಇತರೆ ಮಕ್ಕಳು ಸಾವು-ಬದುಕಿನ ಮಧ್ಯೆ ರಿಮ್ಸ್ ಮತ್ತು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಮುಂಜಾನೆ ಲೊಯೋಲ್ ಶಾಲೆಯ ಬಸ್ ನಲ್ಲಿ ಒಟ್ಟು ೩೨ ವಿದ್ಯಾರ್ಥಿಗಳು ಶಾಲೆಗೆ ತೆರಳುತ್ತಿದ್ದರು ಎಂದು ಹೇಳಲಾ ಗಿದೆ ಕಪಗಲ್ ಗ್ರಾಮದ ಬಳಿ ಸಾರಿಗೆ ಎಕ್ಸ್ ಪ್ರೆಸ್ ಬಸ್ ಚಾಲಕನ ನಿರ್ಲಕ್ಷ್ಯ ಮತ್ತು ರಸ್ತೆಯಲ್ಲಿ ಇರುವ ಗುಂಡಿ ತಪ್ಪಿಸುವ ಸಂದರ್ಭದಲ್ಲಿ ಈ ದುರಂತ ನಡೆದಿದೆ.ಸಾರಿಗೆ ಮತ್ತು ಲೊಯೋಲಾ ಶಾಲೆಯ ಬಸ್ ಮುಖಾಮುಖ ಭೀಕರ ಅಪಘಾತದಿಂದ ಮಾನ್ವಿ ರಸ್ತೆಯಲ್ಲಿ ಮಕ್ಕಳು, ರಕ್ತಸಿಕ್ತ ಅವಸ್ಥೆಯಲ್ಲಿ ಚೆಲ್ಲಾಪಿಲ್ಲಿಯಾಗಿದ್ದರು. ನಾಲ್ವರ ಮಕ್ಕಳಿಗೆ ಎರಡು ಮತ್ತು ಒಂದು ಮತ್ತು ಎರಡು ಕಾಲು ಸಂಪೂರ್ಣವಾಗಿ ನಜ್ಜುಗುಜ್ಜಾಗಿ ದೇಹದಿಂದ ಬೇರ್ಪಟ್ಟಿದ್ದವು. ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ತಳಕ್ಕೆ ದಾವಿಸಿದ ಪಾಲಕರು ಮಕ್ಕಳ ಸ್ಥಿತಿಯನ್ನು ಕಂಡು ಎದೆ ಹೊಡೆದು ಕೊಂಡರು.ಮುಗಿಲು ಮುಟ್ಟುವಂತೆ ಆಕ್ರಂದಿಸಿದರು. ಶಿಕ್ಷಕರ ದಿನಾಚರಣೆಯ ಇಂದು ಅತ್ಯಂತ ಹುರುಪಿನಿಂದ ಶಾಲೆಯೆತ್ತ ಧಾವಿಸಿದ ಮಕ್ಕಳು, ರಸ್ತೆಯಲ್ಲಿ ರಕ್ತದ ಮಡುವಿನ ಮಧ್ಯೆ ಸಾವು ಬದುಕಿನ ಮಧ್ಯೆ ಬಿದ್ದ ದೃಶ್ಯ ಎತ್ತವರ ಕರಳು ಕಿತ್ತು ಬರುವಂತೆ ಮಾಡಿತು. ಮಕ್ಕಳು ಉನ್ನತ ಶಿಕ್ಷಣದಿಂದ ಮಕ್ಕಳು ಮುಪ್ಪಿನಲ್ಲಿ ಆಸರೆಯಾಗುವ ಕನಸು ಹೊತ್ತ, ತಂದೆ-ತಾಯಿ ಕಾಲುಗಳೆ ತುಂಡರಿಸಿ, ರಕ್ತ ಗಾಯ ಅವಸ್ಥೆಯಲ್ಲಿ ನರಳುವ ಕಂದಮ್ಮ ದಾರಣ ಕಂಡು ಮಮ್ಮಲ ಮರುಗಿದರು.ಶಿಕ್ಷಕರ ದಿನಾಚರಣೆ ಎಂದು ನಡೆದ ಈ ದಾರುಣ ಘಟನೆ ಜಿಲ್ಲಾಡಳಿತ, ಜಿಲ್ಲೆ ಜನಪ್ರತಿನಿಧಿಗಳು, ಶಾಲಾ ಆಡಳಿತ ಮತ್ತು ಸಾರಿಗೆ ಇಲಾಖೆಯ ಕಣ್ಣು ತೆರೆಸುವುದೇ. ಗಾಯಾಳು ವಿದ್ಯಾರ್ಥಿಗಳ ಪೈಕಿ ನಿಶಾಹಖಾನ, ಶೋಯೆಬ್ ಖಾನ್ ತಂದೆ ತಾಯಿ ಬೆಂಗಳೂರಿನಲ್ಲಿ ಕೂಲಿ ಕೆಲಸಕ್ಕೆ ತೆರಳಿದ್ದು ಅಜ್ಜಿಯೇ ಇವರ ಆರೈಕೆ ಮಾಡುತ್ತಾರೆ ಎಂದು ಆಳುತ್ತಾ ಹೇಳಿಕೆ ನೀಡುತ್ತಿದ್ದ ದೃಶ್ಯ ಮನಕಲುಕುವಂತಿತ್ತು. ಭೇಟಿ : ಕಪಗಲ್ ಬಳಿ ಗ್ರಾಮದ ಬಳಿ ಗುರುವಾರ ಬೆಳಿಗ್ಗೆ ೯.ಗಂ.ಸಮಯದಲ್ಲಿ ಕೆಎಸ್ಆರ್ ಟಿಸಿ ಬಸ್ ಹಾಗೂ ಲೊಯೊಲಾ ಶಾಲಾ ಬಸ್ ನಡುವೆ ನಡೆದ ಭೀಕರ ಅಪಘಾತದ ಸ್ಥಳಕ್ಕೆ ಮತ್ತು ರಿಮ್ಸ್, ಸರ್ಕಾರಿ ಆಸ್ಪತ್ರೆಗೆ ಶಾಸಕ ಹಂಪಯ್ಯನಾಯಕ, ಮಾಜಿಸಂಸದ ಬಿ.ವಿ.ನಾಯಕ, ಮಾಜಿಶಾಸಕರಾದ ರಾಜಾವೆಂಕಟಪ್ಪನಾಯಕ, ಬಸನಗೌಡ ಬ್ಯಾಗವಾಟ್, ಜಿಲ್ಲಾಧಿಕಾರಿ ಕೆ.ನಿತೀಶ, ಶಿವರಾಜನಾಯಕ ಸಾಹುಕಾರ ಭೇಟಿ ನೀಡಿ ಗಾಯಾಳು ವಿದ್ಯಾರ್ಥಿಗಳನ್ನು, ಪ್ರಯಾಣಿಕರ ಆರೋಗ್ಯ ವಿಚಾರಿಸಿದರು. ಪಾಲಕರಿಗೆ ಧೈರ್ಯ ತುಂಬಿದರು. ಸೂಕ್ತ ಚಿಕಿತ್ಸೆಗೆ ವೈದ್ಯರಿಗೆ ಸೂಚನೆ ನೀಡಿದರು.
ಭೀಕರ ಶಾಲಾ ಬಸ್ ಅಪಘಾತ, ಮಾನ್ವಿ ತಾಲೂಕ ಖಾಸಗಿ ಶಾಲೆಗಳಿಗೆ ರಜೆ :
ಇಂದು ಕಪಗಲ್ ಕ್ರಾಸ್ ಹತ್ತಿರ ನಡೆದ ಖಾಸಗಿ ಶಾಲೆ ಬಸ್ ಮತ್ತು ಕೆ ಎಸ ಆರ್ ಟಿ ಸಿ ಬಸ್ ಮುಖಾಮುಖಿ ಡಿಕ್ಕಿಯಲ್ಲಿ ಮೃತಪಟ್ಟವರಿಗೆ ತೀವ್ರ ಸಂತಾಪ ಸೂಚಿಸುತ್ತಾ, ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸುತ್ತೇವೆ. ಮೃತ ವಿದ್ಯಾರ್ಥಿ ಪೋಷಕರಿಗೆ ಮಕ್ಕಳನ್ನು ಅಗಲಿದ ದುಃಖ ಭರಿಸುವ ಶಕ್ತಿ ಭಗವಂತ ಅವರಿಗೆ ದಯಪಾಲಿಸಿಲಿ ಹಾಗೂ ಗಾಯಗೊಂಡ ವಿದ್ಯಾರ್ಥಿಗಳು ಬೇಗನೆ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇವೆ.
ಇಂದು ಮಾನ್ವಿ ತಾಲೂಕಿನ ಎಲ್ಲಾ ಖಾಸಗಿ ಶಾಲೆಗಳಿಗೆ ಮಧ್ಯಾಹ್ನದ ರಜೆ ಘೋಷಿಸುವುದರ ಮೂಲಕ ಮೃತ ವಿದ್ಯಾರ್ಥಿಗಳಿಗೆ ಮಾನ್ವಿ ತಾಲೂಕ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ವತಿಯಿಂದ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸುತ್ತೇವೆ ಎಂದು ಅಧ್ಯಕ್ಷ ಹೆಚ್.ಶರ್ಫುದ್ದೀನ್ ಪೋತ್ನಾಳ ತಿಳಿಸಿದ್ದಾರೆ.