ಮಾನ್ವಿ : ರಾಜ್ಯದಲ್ಲಿ ಕಳೆದ 15 ವರ್ಷಗಳಿಂದ ಸಂಘಟಿತರಾಗಿ ಹೋರಾಟ ನಿರತರಾಗಿರುವ ಆಶಾ ಕಾರ್ಯಕರ್ತೆಯರ ಸಂಘ ಅನೇಕ ಯಶಸ್ಸುಗಳನ್ನು ಕಂಡಿದೆ. ಇದೀಗ ಒಗ್ಗಟ್ಟನ್ನು ಮೈಗೂಡಿಸಿಕೊಂಡು,ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳನ್ನು ಅರಿತು ಸೂಕ್ತ ಬೇಡಿಕೆಗಳನ್ನು ರೂಪಿಸಿಕೊಂಡು ಉನ್ನತ ಹೋರಾಟಕ್ಕೆ ಸಜ್ಜಾಗಬೇಕಿದೆ ಎಂದು ಎಐಯುಟಿಯುಸಿ ಜಿಲ್ಲಾ ಅಧ್ಯಕ್ಷ ವೀರೇಶ್ ಎನ್ ಎಸ್ ಹೇಳಿದರು.
ಪಟ್ಟಣದ ಟೌನ್ ಹಾಲ್ ನಲ್ಲಿ ಏರ್ಪಡಿಸಿದ್ದ ಆಶಾ ಕಾರ್ಯಕರ್ತೆಯರ ಪ್ರಥಮ ಜಿಲ್ಲಾ ಸಮ್ಮೇಳನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಂಘದ ಜಿಲ್ಲಾ ಕಾರ್ಯದರ್ಶಿ ಈರಮ್ಮ ಮಾತನಾಡಿ ಆಶಾ ಕಾರ್ಯಕರ್ಯೆಯರ ಸಂಘ ನಿರಂತರ 15 ವರ್ಷಗಳಿಂದ ಹೋರಾಟ ಮಾಡಿ ಹಲವಾರು ಸೌಲಭ್ಯ ಪಡೆದುಕೊಂಡಿದೆ. ಇನ್ನೂ ಹಲವಾರು ಸಮಸ್ಯೆಗಳನ್ಬು ಎದುರಿಸುತ್ತಿದ್ದಾರೆ. ಆದ್ದರಿಂದ ನಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ತಳಮಟ್ಟದಿಂದ ಸಂಘ ಬಲಪಡಿಸಬೇಕು ಎಂದರು.
ತಾಲೂಕು ಗೌರವ ಅಧ್ಯಕ್ಷ ಚನ್ನಬಸವ ಜಾನೇಕಲ್ ಮಾತನಾಡಿ ಕೋವಿಡ್ ಸಂದರ್ಭದಲ್ಲಿ ಎಲ್ಲರೂ ಮನೆಯಲ್ಲಿ ಇದ್ದಾಗ ಆಶಾ ಕಾರ್ಯಕರ್ತೆಯರು ಕೋವಿಡ್ ಬಂದವರ ಮನೆ ಮನೆಗೆ ತೆರಳಿ ಅವರ ಜೀವ ಉಳಿಸುವ ಕೆಲಸ ಮಾಡಿದ್ದಾರೆ. ವಿಶ್ವ ಸಂಸ್ಥೆ ಅವರ ಸೇವೆಗೆ ಗೌರವ ಸಲ್ಲಿಸಿದೆ ಎಂದರು. ಆಶಾಗಳನ್ನು ಸಮಾಜದಲ್ಲಿ ಘನತೆ ಗೌರವದಿಂದ ನೋಡುವಂತೆ ಮಾಡಲು ಧ್ವನಿಎತ್ತಬೇಕಿದೆ ಎಂದರು.
ಈ ಸಮ್ಮೇಳನದಲ್ಲಿ ಆಶಾ ಕಾರ್ಯಕರ್ತೆಯರಿಗೆ ಕಾರ್ಮಿಕರ ಸ್ಥಾನ ನೀಡಿ ಕನಿಷ್ಠ ವೇತನ, ಶಾಸನಬದ್ದ ಸೌಲಭ್ಯಗಳಿಗೆ ಹೋರಾಡಬೇಕೆಂಬ ಮುಖ್ಯ ಗೊತ್ತುವಳಿಯನ್ನು ಅಂಗೀಕರಿಸಲಾಯಿತು.
ಮುಖಂಡರಾದ ಮಹೇಶ್. ಸಿ, ಹಾಗೂ ಅಣ್ಣಪ್ಪ ಅವರು ಸಹ ಮಾತನಾಡಿ, ಸಂಘದ ಮಹತ್ವ ಹೇಳುತ್ತಾ ನಾಯಕತ್ವ ವಹಿಸುವುದು ಸ್ಥಾನಮಾನಕ್ಕಲ್ಲ, ಜವಾಬ್ದಾರಿ ನಿರ್ವಹಿಸಲು ಎಂದು ಹೇಳಿದರು.
ಈ ಸಮ್ಮೇಳನದ ಅಧ್ಯಕ್ಷತೆ ವಹಿಸುದ್ದ ಟಿ. ರಾಧಾ ಮಾತನಾಡಿದರು. ಆಶಾ ಕಾರ್ಯಕರ್ತೆಯರ ಸಂಘದ ತಾಲೂಕು ಗೌರವ ಅಧ್ಯಕ್ಷರಾಗಿ ಶ್ರೀದೇವಿ ಬ್ಯಾಗವಾಟ, ತಾಲೂಕು ಅಧ್ಯಕ್ಷರಾಗಿ ಸುಂದರಮ್ಮ, ಸುಜಾತ ಕುರ್ಡಿ, ನಸೀಮಾ ಬೇಗಮ್, ಶಾರದಾ ಕವಿತಾಳ, ನಿರ್ಮಲ ಮದ್ಲಾಪುರ ಇವರು ಉಪಾಧ್ಯಕ್ಷರಾಗಿ, ಶೈಲಜಾ ಕಲ್ಲೂರು ಇವರು ಕಾರ್ಯದರ್ಶಿಯಾಗಿ, ಶ್ರೀದೇವಿ ಸಂಗಾಪುರ, ಪ್ಯಾರಿಬೇಗಮ್, ಬಸಮ್ಮ ಪಾಮನಕಲ್ಲೂರು ಜಂಟಿ ಕಾರ್ಯದರ್ಶಿಗಳಾಗಿ 13 ಜನರ ಕಾರ್ಯಕಾರಿ ಸಮಿತಿ ತಾಲೂಕು ನೂತನ ಸಮಿತಿಯನ್ನು ರಚಿಸಲಾಯಿತು.
ಈ ಕಾರ್ಯಕ್ರಮದ ಮೊದಲು ಪಂಪಾ ಉದ್ಯಾನವನದಿಂದ ಟೌನ್ ಹಾಲ್ ವರೆಗೆ ಮೆರವಣಿಗೆ ನಡೆಸಲಾಯಿತು.
ಈ ಸಮ್ನೇಳನದಲ್ಲಿ ಬಸಮ್ಮ ಪಾಮನಕಲ್ಲೂರು, ಬಸಮ್ಮ ಕುರ್ಡಿ, ಶಾರದಾ, ಜ್ಯೋತಿ, ಚನ್ನಮ್ಮ, ವಿಜಯಲಕ್ಷ್ಮಿ ಗೊತ್ತುವಳಿ ಬಗ್ಗೆ ಮಾತನಾಡಿದರು. ಈ ಮೂಲಕ ಸಮ್ಮೇಳನ ಯಶಸ್ವಿಯಾಗಿ ಜರುಗಿತು. ಬಸಮ್ಮ, ಪದ್ಮಾ ಸ್ವಾಗತಿಸಿದರು ಅನುರಾಧ ಕಾರ್ಯಕ್ರಮ ನಿರೂಪಿಸಿ ಕೊನೆಯಲ್ಲಿ ವಂದಿಸಿದರು.