ಅಫಜಲಪುರ:ರಾಷ್ಟ್ರಾದ್ಯಂತ ಸುದ್ದಿ ಮಾಡಿದ್ದ ನೇಹಾ ಹಿರೇಮಠ ಕೊಲೆ ಪ್ರಕರಣ ಜನಮಾನಸದಿಂದ ಮರೆಯುವ ಮುನ್ನವೇ ಹುಬ್ಬಳ್ಳಿಯಲ್ಲಿ ಅಂಥದ್ದೇ ಮತ್ತೊಂದು ಕೊಲೆ ನಡೆದಿದೆ ಎಂದು ಜೆಡಿಎಸ್ ರಾಜ್ಯ ಪ್ರಧಾನ ಕರ‍್ಯರ‍್ಶಿ ಶಿವಕುಮಾರ್ ನಾಟಿಕರ್ ಕಳವಳ ವ್ಯಕ್ತಪಡಿಸಿದ್ದಾರೆ
ಅಫಜಲಪುರ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ಬಾರಿ ಹುಬ್ಬಳ್ಳಿಯ ವೀರಾಪುರ ಬಡಾವಣೆಯ ಅಂಜಲಿ ಅಂಬಿಗೇರ ಎನ್ನುವ ಯುವತಿ ಕೊಲೆಯಾಗಿದ್ದಾಳೆ. ರಾಜ್ಯದಲ್ಲಿ ಮೇಲಿಂದ
ಮೇಲೆ ಇಂತಹ ದರ‍್ಘಟನೆಗಳು ನಡೆಯುತ್ತಿರುವುದು ರಾಜ್ಯದ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದಕ್ಕೆ ಇನ್ನೊಂದು ನಿರ‍್ಶನವಾಗಿದೆ ಎಂದರು.
ಕೊಲೆಯಂತಹ ಪಾತಕ ಕೃತ್ಯ ಎಸಗಿಯೂ ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳಬಹುದು ಎನ್ನುವ ಧರ‍್ಯ ಬರಲು ರ‍್ಕಾರ ಕಾನೂನು ಸುವ್ಯವಸ್ಥೆಯ ನರ‍್ವಹಣೆಯಲ್ಲಿ ವಿಫಲವಾಗಿರುವುದೇ ಕಾರಣ ಎಂದು ದೂರಿದರು. ಅದರಲ್ಲಿಯೂ ಅಂಜಲಿ ಕುಟುಂಬಸ್ಥರು ಮುಂಚಿತವಾಗಿ ದೂರು ನೀಡಿದ್ದರೂ ಪೋಲಿಸ್ ಇಲಾಖೆ ನರ‍್ಲಕ್ಷ್ಯ ತೋರಿರುವುದು ಖಂಡನೀಯವಾಗಿದೆ
ಸರ‍್ವಜನಿಕರ ರಕ್ಷಣೆಯ ಜವಾಬ್ದಾರಿ ರ‍್ಕಾರದ ಆದ್ಯ ರ‍್ತವ್ಯ ಹಾಗಾಗಿ ಹಂತಕನಿಗೆ ಕಠಿಣ ಶಿಕ್ಷೆಯಾಗುವಂತೆ ನೋಡಿಕೊಂಡು, ಕಾನೂನು ವ್ಯವಸ್ಥೆ ಸುಸ್ಥಿತಿಯಲ್ಲಿರುವಂತೆ ರ‍್ಕಾರ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದರು.