ರಾಯಚೂರು,ಜೂ.21 : ರಾಜ್ಯ ಸರಕಾರ ಪೆಟ್ರೋಲ್,ಡಿಸೇಲ್ ಬೆಲೆ ಏರಿಕೆ ಖಂಡಿಸಿ ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಶಾಸಕ ಡಾ.ಶಿವರಾಜ್ ಪಾಟೀಲ್ ನೇತೃತ್ವದಲ್ಲಿ ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ಮತ್ತು ರಸ್ತೆ ತಡೆ ಚಳವಳಿ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಡಾ.ಶಿವರಾಜ ಪಾಟೀಲ್ ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಆಡಳಿತಕ್ಕೆ ಬಂದ ಮೇಲೆ ದಿನಕ್ಕೊಂದು ರೀತಿಯಲ್ಲಿ ಬೆಲೆ ಏರಿಕೆ ಮಾಡಿ ಸಾರ್ವಜನಿಕರಿಗೆ ಹೊರೆ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ದಿಢೀರನೆ ಡಿಸೇಲ್, ಪೆಟ್ರೋಲ್ ಬೆಲೆ ಹೆಚ್ಚಳ ಮಾಡಿದ್ದಾರೆ ತಾವು ಘೋಷಣೆ ಮಾಡಿದ ಬಿಟ್ಟಿ ಭಾಗ್ಯಗಳಿಗೆ ಜನತೆಗೆ ತೆರಿಗೆ ಹೊರೆ ಹಾಕುತ್ತಿದ್ದಾರೆ. ವಾಲ್ಮೀಕಿ ನಿಗಮದ 187 ಕೋಟಿ ರೂಪಾಯಿ ದುರ್ಬಳಕೆ ಮಾಡಿಕೊಂಡಿದೆ ಎಂದು ಆರೋಪಿಸಿದರು.
ಬೃಹತ್ ಸಂಖ್ಯೆಯಲ್ಲಿ ಸೇರಿದ್ದ ಬಿಜೆಪಿ, ಜೆಡಿಎಸ್ ಮುಖಂಡರು, ಕಾರ್ಯಕರ್ತರು ಅಂಬೇಡ್ಕರ್ ವೃತ್ತದಲ್ಲಿ ಕುಳಿತು ಕೊಂಡು ಘೋಷಣೆ ಕೂಗುತ್ತ ರಸ್ತೆ ತಡೆ ಚಳವಳಿ ನಡೆಸಿದರು. ನಂತರ ಪೋಲಿಸರು ಶಾಸಕರು ಸೇರಿದಂತೆ ಬಿಜೆಪಿ, ಜೆಡಿಎಸ್ ಪಕ್ಷದವರನ್ನು ಬಂಧಿಸಲಾಯಿತು.
ಪ್ರತಿಭಟನೆಯಲ್ಲಿ ಶಾಸಕ ಶಿವರಾಜ ಪಾಟೀಲ, ಜೆಡಿಎಸ್ ಜಿಲ್ಲಾ ಅಧ್ಯಕ್ಷ ಎಂ.ವಿರುಪಾಕ್ಷಿ, ನಗರ ಅಧ್ಯಕ್ಷ ಊಟ್ಕೂರು ರಾಘವೇಂದ್ರ, ಜಿಲ್ಲಾ ಕಾರ್ಯದರ್ಶಿ ಜಿ.ಶಂಕರ ರೆಡ್ಡಿ , ನಗರ ಅಧ್ಯಕ್ಷ ಪಕ್ಷದ ಹಿರಿಯರಾದ ಗಿರೀಶ ಕನಕವೀಡು, ಶಿವಬಸ್ಸಪ್ಪ ಮಾಲಿ ಪಾಟೀಲ, ತಿಮ್ಮಪ್ಪ ನಾಡಗೌಡ, ಕಡಗೋಲು ಆಂಜನೇಯ, ವೈ.ಗೋಪಾಲ ರೆಡ್ಡಿ,ಮುಖಂಡರಾದ ಎನ್.ಶ್ರೀನಿವಾಸ ರೆಡ್ಡಿ,ಎನ್.ಕೆ.ನಾಗರಾಜ, ಈ.ಶಶಿರಾಜ, ಪೊಗಲ್ ಶ್ರೀನಿವಾಸ, ಸಂತೋಷರಾಜಗುರು, ಪಿ.ಯಲ್ಲಪ್ಪ,ಎನ್.ವಿನಾಯಕ ರಾವ್, ನಗರ ಪ್ರಧಾನ ಕಾರ್ಯದರ್ಶಿಗಳಾದ ಕಡಗೋಲು ರಾಮಚಂದ್ರ,ಪಲುಗುಲ ನಾಗರಾಜ, ಜೆ.ಎಂ.ಮೌನೇಶ, ಸುರೇಸ, ಜಿಲ್ಲಾ ಮಿಳಾ ಅಧ್ಯಕ್ಷೆ ಕಡಗೋಲು ಲಲಿತಾ ಆಂಜನೇಯ,ಜಯಶ್ರೀ ರೆಡ್ಡಿ, ಅನಿತಾ ನವಲಕಲ್, ನಾಗೇವೇಣಿ, ಸೇರಿದಂತೆ ವಿವಿಧ ಮೋರ್ಚಾಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು,ಬೂತ್ ಅಧ್ಯಕ್ಷರು ಮತ್ತು ಪಕ್ಷದ ಕಾರ್ಯಕರ್ತರು ಜೊತೆಗೆ ಸಾರ್ವಜನಿಕರು ಸಹ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಸೇರಿದಂತೆ ಪಕ್ಷದ ಕಾರ್ಯಕರ್ತರು ಭಾಗಹಿಸಿದರು. ಎಲ್ಲಾರನ್ನು ಭಂದಿಸಿ ನಂತರ ಬಿಡುಗಡೆಗೊಳಿಸಲಾಯಿತು.