ಮೆಲ್ ರೋಜ್ ಶಾಲೆಯಲ್ಲಿ ೭೮ನೆಯ ಸ್ವಾತಂತ್ರೊö್ಯÃತ್ಸವ ಧ್ವಜ ರೋಹಣ

Eshanya Times

ರಾಯಚೂರು, ಆ. ೧೫: ಇಂದು ನಗರದ ಮೆಲ್ ರೋಜ್ ಸ್ಕೂಲ್ ಆಫ್ ಜರ್ನಲಿಜಂ ಶಾಲಾ ಆವರಣದಲ್ಲಿ ೭೮ನೆಯ ಸ್ವಾತಂತ್ರೊö್ಯÃತ್ಸವ ವಿಜೃಂಭಣೆ ಕಾರ್ಯಕ್ರಮ ಶಾಲೆಯ ಕಾರ್ಯದರ್ಶಿಗಳಾದ ಎಸ್. ಕೆ. ನಾಗರೆಡ್ಡಿರವರು ಧ್ವಜಾರೋಹಣ ಹಾರಿಸಿ ಉದ್ಘಾಟಿಸಿದರು.
ಈ ಕಾರ್ಯಕ್ರಮವನ್ನು ಉದ್ದೇಶಿಸಿ ಎಸ್. ಕೆ. ನಾಗರೆಡ್ಡಿರವರು ಮಕ್ಕಳಿಗೆ ಸಮಯ ಸ್ಪೂರ್ತಿ ಉತ್ತೇಜನ ದಾಯಕವಾಗಿ ದೇಶದ ಸ್ವಾತಂತ್ರೊö್ಯÃತ್ಸವ ಮತ್ತು ಗಣರಾಜ್ಯೋತ್ಸವ ಕಾರ್ಯಕ್ರಮಗಳನ್ನು ಮುತುವರ್ಜಿ ಯಿಂದ ಸ್ಪಂದಿಸಿ ಪಾಲ್ಗೊಳ್ಳುವಂತೆ ಶಿಕ್ಷಕರು ಮತ್ತು ಪಾಲಕರು ಶ್ರಮಿಸಬೇಕಾಗಿದೆ ಎಂದರು. ಕೇವಲ ಶೈಕ್ಷಣಿಕ ಪ್ರಗತಿ ಮತ್ತು ಕಲಿಕಾ ಚಟುವಟಿಕೆಗಳ ಮೂಲವಾಗಿಯೇ ಸ್ವಾತಂತ್ರ ವಿವೇಚನೆಯಿಂದ ದುರಾಡಳಿತ ಮತ್ತು ದಬ್ಬಾಳಿಕೆಯ ಸಾಮ್ರಾಜ್ಯಶಾಹಿ ಧೋರಣೆಗೆ ತಕ್ಕ ಪ್ರತಿ ಉತ್ತರ ನೀಡಲು ಧೈರ್ಯ ಮತ್ತು ಸಾಹಸಗಳ ಶೈಕ್ಷಣಿಕ ಮೌಲ್ಯಗಳಿಂದ ಮಾತ್ರ ಸಾಧಿಸಲು ಸಾಧ್ಯವಾಗುತ್ತದೆ. ಅಂಧಕಾರದ ಜೀವನದಿಂದ ಬೆಳಕು ಚೆಲ್ಲಲು ಸಹಕಾರಿಯಾಗುತ್ತದೆ ಎಂದರು.
ಇದೇ ಕಾರ್ಯಕ್ರಮದಲ್ಲಿ ಇನ್ನೋರ್ವ ಅತಿಥಿಯಾದ ಸತ್ಯರಂ ಪವನ್ ಕುಮಾರ್ ರೆಡ್ಡಿ ವಕೀಲರು ಮಾತನಾಡಿ ಮಕ್ಕಳಲ್ಲಿ ಸ್ವಾತಂತ್ರ‍್ಯ ಪೂರ್ವ ಮತ್ತು ನಂತರದ ನಡೆದ ಐತಿಹಾಸಿಕ ಘಟನೆಗಳ ಪ್ರತಿಯೊಂದು ಮಾಹಿತಿಯನ್ನು ಮಕ್ಕಳಲ್ಲಿ ಯೂಟ್ಯೂಬ್ ಮೂಲಕ “ಭಾರತಕಿ ಏಕ್ ಕೋಚ್” ಎಂಬ ಧಾರಾವಾಹಿಯ ಮೂಲಕ ಮನದಟ್ಟವಾಗಿ ತಿಳಿದುಕೊಡು ಸಾಮಾಜಿಕ ಚಿಂತನೆಯಲ್ಲಿ ತೊಡಗಲು ಪ್ರೇರೇಪಿಸಬೇಕೆಂದು ಹೇಳಿದರು.
ಇದರಿಂದ ಮಕ್ಕಳಲ್ಲಿ ದೇಶಭಕ್ತಿಯ ಮೌಲ್ಯಗಳು ಮತ್ತು ಹೋರಾಟಗಾರರ ಜೀವದಾನದ ಸ್ವಾತಂತ್ರ‍್ಯಕ್ಕಾಗಿ ಅವಿರತ ಶ್ರಮ ಅರ್ಥವಾಗಲು ಸಾಧ್ಯವಾಗುತ್ತದೆ ಎಂದರು.

ಶಾಲೆಯಲ್ಲಿ ಮಕ್ಕಳು ದೇಶಭಕ್ತಿಯ ಗೀತೆ, ಹಾಡು, ನೃತ್ಯಗಳು ಗಂಡು ಮತ್ತು ಹೆಣ್ಣು ಮಕ್ಕಳ ಮೂಲಕ ಪಿರಾಮಿಡ್ ಆಕೃತಿಯನ್ನು ತಮ್ಮ ಪಾಲಕರ ಮುಂದೆ ಉತ್ತಮ ರೀತಿಯಲ್ಲಿ ಪ್ರದರ್ಶಿಸಿ ಉತ್ಸವ ಪಟ್ಟರು. ಈ ಕಾರ್ಯಕ್ರಮ ಮುಖ್ಯ ಗುರುಗಳಾದ ಎನ್. ಪ್ರಣಯ, ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಶಿಕ್ಷಕೇತರ ವೃಂದ, ಪಾಲಕರು ಉಪಸ್ಥಿತರಿದ್ದರು.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

error: Content is protected !!
";