ಶಿವಪ್ರಿಯ ಪತ್ತಿನ ಸಹಕಾರಿಗೆ ೭೦.೬೦ ಲಕ್ಷ ನಿವ್ವಳ ಲಾಭ: ಜಾಕೀರ್ ಮೋಹಿಯುದ್ದೀನ್

Eshanya Times
WhatsApp Group Join Now

ಮಾನ್ವಿ,: 2023-24 ನೇ ಸಾಲಿನಲ್ಲಿ ಶಿವಪ್ರಿಯ ಪತ್ತಿನ ಸೌಹರ‍್ದ ಸಹಕಾರಿ ಸಂಘವು ೭೦.೬೦ ಲಕ್ಷ ನಿವ್ವಳ ಲಾಭ ಗಳಿಸುವ ಮೂಲಕ ಅತ್ಯುತ್ತಮ ಸಹಕಾರಿ ಸಂಘವೆಂದು ಖ್ಯಾತಿ ಪಡೆದಿದೆ ಎಂದು ಶಿವಪ್ರಿಯ ಪತ್ತಿನ ಸೌಹರ‍್ದ ಸಹಕಾರಿ ಸಂಘದ ಅಧ್ಯಕ್ಷ ಜಾಕೀರ್ ಮೋಹಿಯುದ್ದೀನ್ ಹೇಳಿದರು.
ಪಟ್ಟಣದ ಶಿವಪ್ರಿಯ ಪತ್ತಿನ ಸೌಹರ‍್ದ ಸಹಕಾರಿ ಸಂಘದ ಸಭಾಂಗಣದಲ್ಲಿ ನಡೆದ ೧೦ನೇ ವರ‍್ಷಿಕ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ೨೦೧೪ ರಲ್ಲಿ ಆರಂಭಗೊಂಡ ಶಿವಪ್ರಿಯ ಪತ್ತಿನ ಸೌಹರ‍್ದ ಸಹಕಾರಿ ಸಂಘವು ೨೦೧೫–೧೬ ನೇ ಸಾಲಿನಲ್ಲಿ ಸಂಪರ‍್ಣ ರಾಯಚೂರು ಜಿಲ್ಲೆಯ ನಂತರ ೨೦೧೮-೧೯ ನೇ ಸಾಲಿನಲ್ಲಿ ರಾಯಚೂರು ಜಿಲ್ಲೆ ಸೇರಿದಂತೆ ಬಳ್ಳಾರಿ, ಕೊಪ್ಪಳ, ಯಾದಗಿರಿ, ಕಲಬುರಗಿ, ಜಿಲ್ಲೆಯನ್ನೊಳಗೊಂಡಿರುತ್ತದ ಕರ‍್ಯವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ. ಉತ್ತಮ ಸಹಕಾರಿ ಸೇವೆಗಾಗಿ ಭಾರತ ಸಹಕಾರಿ ಒಕ್ಕೂಟದಿಂದ ಉತ್ತಮ ಸಹಕಾರಿ ಪ್ರಶಸ್ತಿ ಲಭಿಸಿದೆ ಎಂದರು.
೩೧-೦೩-೨೦೨೪ ಕೈ ಸಹಕಾರಿಯಲ್ಲಿ ಒಟ್ಟು ೨೪೧೫ ಸದಸ್ಯರು ಹಾಗೂ ಒಟ್ಟು ಷೇರು ಬಂಡವಾಳ ೭೩.೨೭ ಲಕ್ಷ ಹೊಂದಿದೆ. ಸಹಕಾರಿಯಲ್ಲಿ ಒಟ್ಟು ವಿವಿಧ ರೀತಿಯ ಠೇವಣಿಗಳ ಮೊತ್ತ ೧೮,೦೭,೪೦,೩೭೨ ಕೋಟಿಗಳಷ್ಟಿರುತ್ತದೆ ಹಾಗೂ ಸಹಕಾರಿಯ ಕಳೆದ ಸಾಲಿಗೆ ಹೋಲಿಸಿದರೆ ರೂ. ೧,೯೨,೧೮,೪೮೮ ಗಳಷ್ಟು ಠೇವಣಿಗಳು ಹೆಚ್ಚಾಗಿರುತ್ತದೆ. ಇದು ನಮ್ಮ ಸದಸ್ಯರ ನಮ್ಮ ಸಹಕಾರಿಯ ಮೇಲೆ ಇಟ್ಟಿರುವ ವಿಶ್ವಾಸದ ಪ್ರತೀಕ ಎಂದು ಹೇಳಲು ನನಗೆ ಹೆಮ್ಮೆ ಎನಿಸುತ್ತದೆ. ಅಲ್ಲದೇ ರ‍್ನಾಟಕ ಸೌಹರ‍್ದ ಕಾಯ್ದೆಯ ಅನ್ವಯ ಎಲ್ಲಾ ಸದಸ್ಯರು ಸಹಕಾರಿಯಲ್ಲಿ ಖಾತೆಗಳನ್ನು ತೆರೆದು ವ್ಯವಹರಿಸಲು ಹಾಗೂ ತಮ್ಮ ಠೇವಣಿಗಳನ್ನು ಇಟ್ಟು ಸಹಕಾರಿಯ ಏಳ್ಗೆಯಲ್ಲಿ ಸಹಕರಿಸಿದ್ದಾರೆ. ೩೧-೦೩-೨೦೨೩ ಕ್ಕೆ ಸಹಕಾರಿಯ ದುಡಿಯುವ ಬಂಡವಾಳವು೧೯೧೬.೨೫ ಲಕ್ಷಗಳಷ್ಟಿತ್ತು ಹಾಗೂ ದಿನಾಂಕ ೩೧-೦೩-೨೦೨೪ ಕ್ಕೆ ದುಡಿಯುವ ಬಂಡವಾಳವು ರೂ. ೨೨೭೨.೯೬ ಲಕ್ಷಗಳಾಗಿದೆ ಎಂದರು.
ಸಹಕಾರಿಯ ಮೂಲ ಉದ್ದೇಶವಾದ ಪರಸ್ಪರ ಸಹಕಾರ-ಪರಸ್ಪರ ಅಭಿವೃದ್ಧಿಗೆ ಅನುಗುಣವಾಗಿ ಸಹಕಾರಿಯು ಈ ಸಾಲಿನಲ್ಲಿಯೂ ಸದಸ್ಯರಿಗೆ ವಿವಿಧ ಉದ್ದೇಶಗಳಿಗೆ ಸಾಲವನ್ನು ನೀಡಿರುತ್ತದೆ. ವರದಿ ಸಾಲಿನ ಅಂತ್ಯಕ್ಕೆ ಸಾಲ ಮತ್ತು ಮುಂಗಡಗಳು ರೂ.೧೭,೮೭,೦೫,೬೮೩ ಇರುತ್ತವೆ ಪ್ರಸಕ್ತ ಸಾಲಿನಲ್ಲಿ ಸಹಕಾರಿಯ ಸಿಬ್ಬಂದಿ ಹಾಗೂ ಆಡಳಿತ ಮಂಡಳಿಯ ಎಲ್ಲಾ ಸದಸ್ಯರ ಪರಿಶ್ರಮದಿಂದಾಗಿ ಸಹಕಾರಿಯು ವಸೂಲಾತಿಯಲ್ಲಿ ಶೇ.೯೭.೩೮% ರಷ್ಟು ಪ್ರಗತಿ ಸಾಧಿಸಿದೆ. ೩೧-೦೩-೨೦೨೪ ಕ್ಕೆ ಸಹಕಾರಿಯು ಬೀಳಗಿ ಪಟ್ಟಣ ಸಹಕಾರಿ ಬ್ಯಾಂಕಿನಲ್ಲಿ ಮುದ್ದತ್ ಠೇವಣಿ ರೂಪದಲ್ಲಿ೧೦೮.೬೭ ಲಕ್ಷಗಳು ಮತ್ತು ಆರ್ ಡಿಸಿಸಿ ಬ್ಯಾಂಕ್ ಮಾನವಿ ಶಾಖೆಯಲ್ಲಿ ೨೬೧೪ ಲಕ್ಷಗಳು ಹಾಗೂ ವಿಕಾಶ ಬ್ಯಾಂಕ್ ಸಿಂಧನೂರ್ ಶಾಖೆಯಲ್ಲಿ ೧೩೨.೩೮ ಲಕ್ಷ ಸೇರಿದಂತೆ ವಿವಿಧ ಶಾಖೆಗಳಲ್ಲಿ ೫೦೫.೦೪ ಲಕ್ಷ ತೊಡಗಿಸುವ ಮೂಲಕ ಪ್ರಸಕ್ತ ಸಾಲಿನಲ್ಲಿ ೭೦.೬೦ ಲಕ್ಷ ನಿವ್ವಳ ಲಾಭ ಗಳಿಸಿದೆ. ಈ ೧೦ ರ‍್ಷಗಳ ಅವಧಿಯಲ್ಲಿ ಅತ್ಯುತ್ತಮ ರ‍್ಥಿಕ ಪ್ರಗತಿ ಸಾಧಿಸಲು ಸಹಕಾರಿಯ ಎಲ್ಲಾ ಸದಸ್ಯರು, ಆಡಳಿತ ಮಂಡಳಿ ಸಹಕಾರ ಮತ್ತು ಸಿಬ್ಬಂದಿಗಳ ಪರಿಶ್ರಮ ಪ್ರಮುಖ ಕಾರಣವಾಗಿದೆ ಎಂದು ಜಾಕೀರ್ ಮೋಹಿಯುದ್ದೀನ್ ತಿಳಿಸಿದರು.
೨೦೧೭-೧೮ ಸಾಲಿನಲ್ಲಿ ದಿ.ಮಮತಾಬಸವರಾಜ ಸಹಕಾರಿಯ ಸಂಸ್ಥಾಪಕ ಅಧ್ಯಕ್ಷರ ಆಶಯದಂತೆ ಮಾನವಿಯ ಸರ‍್ವಜನಿಕರಿಗೆ ಅನುಕೂಲವಾಗಲೆಂದು ಸಹಕಾರಿಯಲ್ಲಿ ಇ-ಸ್ಟಾಂಪಿಂಗ್ ಸೇವೆಯನ್ನು ಆರಂಭಿಸಲಾಗಿದೆ. ಹಾಗೂ ಸಹಕಾರಿಗೆ ಎಂದೆ ಸಹಕಾರಿಯ ಸ್ವಂತ ನಿವೇಶನವನ್ನು ಕೆಎಚ್ ಬಿ ಕಾಲೋನಿಯಲ್ಲಿ ಖರೀದಿಸಿದ್ದು ಸಹಕಾರಿಗೆ ಸ್ವಂತ ಕಟ್ಟಡ ಹೊಂದುವ ಉದ್ದೇಶವನ್ನು ಈಡೇರಿಸಲಾಗುತ್ದೆ ಎಂದರು.
ಶಿವಪ್ರಿಯ ಪತ್ತಿನ ಸೌಹರ‍್ದ ಸಹಕಾರಿ ಸಂಘವು ರ‍್ನಾಟಕ ಸೌಹರ‍್ದ ಕಾಯಿದೆ ೧೯೯೭ರ ಅನುಗುಣವಾಗಿ ಸಹಕಾರಿಯ ವ್ಯವಹಾರಗಳನ್ನು ಕೈಗೊಳ್ಳವುದು. ರ‍್ಥಿಕವಾಗಿ ಹಿಂದುಳಿದವರಿಗೆ, ದರ‍್ಬಲ ರ‍್ಗದವರಿಗೆ, ವ್ಯಾಪಾರಿಗಳಿಗೆ ಅವರ ರ‍್ಥಿಕ ಮಟ್ಟ ಸುಧಾರಿಸುವಂತಹ ಗೃಹ ಕೈಗಾರಿಕೆ, ವ್ಯಾಪಾರ ಮುಂತಾದವುಗಳಿಗೆ ಸಾಲ ನೀಡುವುದು ನೌಕರದಾರರಿಗೆ, ಉದ್ದಿಮೆದಾರರಿಗೆ, ಸ್ವಯಂ ಉದ್ಯೋಗಿಗಳಿಗೆ ಅವರವರ ಬೇಡಿಕೆಗೆ ಅನುಗುಣವಾಗಿ ಅವರ ರ‍್ಥಿಕ ಪರಿಸ್ಥಿತಿ ಸುಧಾರಿಸಲು ಸಾಲವನ್ನು ಕೊಡುವುದು. ಸದಸ್ಯರಿಂದ ಠೇವಣೆ ಸಂಗ್ರಹಿಸುವುದು ಮತ್ತು ಸಂಸ್ಥೆಯ ಆಡಳಿತದಲ್ಲಿ ಪಾರರ‍್ಶಕತೆ ಕಾಪಾಡಿಕೊಳ್ಳುವುದು ಶಿವಪ್ರಿಯ ಪತ್ತಿನ ಸೌಹರ‍್ದ ಸಹಕಾರಿಯ ಧ್ಯೇಯ ಮತ್ತು ಉದ್ದೇಶವಾಗಿದೆ ಎಂದರು.
ಶಿವಪ್ರಿಯ ಪತ್ತಿನ ಸೌಹರ‍್ದ ಸಹಕಾರಿ ರ‍್ಥಿಕ ವಹಿವಾಟುಗೆ ಸೀಮಿತವಾಗಿರದೆ ರ‍್ಕಾರಿ ಶಾಲೆಯನ್ನು ದತ್ತು ಪಡೆದು ಶಾಲೆಯ ಅಭಿವೃದ್ಧಿ ಮತ್ತು ೧೦೦ ರಷ್ಟು ಫಲಿತಾಂಶ ಪಡೆದಾಗ ಪುರಸ್ಕಾರ ನೀಡುತ್ತಾ ಬರಲಾಗಿದೆ. ಶಿಕ್ಷಣ, ಪರಿಸರ, ಸಾಹಿತ್ಯ, ಸಾಂಸ್ಕೃತಿಕ, ಆರೋಗ್ಯ ಕ್ಷೇತ್ರಗಳಲ್ಲಿ ಸೇವೆಯನ್ನು ಒದಗಿಸಿರುವುದರ ಜೊತೆಗೆ ಕೋವಿಡ್ ಸಮಯದಲ್ಲಿ ಗುರುತರವಾದ ರ‍್ಥಿಕ ಸೇವೆ ಸಲ್ಲಿಸುವ ಮೂಲಕ ಇನ್ನಿತರ ಸಮಾಜಮುಖಿ ಸೇವೆಗಳನ್ನು ನಮ್ಮ ಸಹಕಾರಿಯಿಂದ ಕೈಗೊಂಡಿದ್ದೇವೆ ಎಂದು ಜಾಕೀರ್ ಮೋಹಿಯುದ್ದೀನ್ ಹೇಳಿದರು.
ಈ ಕರ‍್ಯಕ್ರಮವನ್ನು ಉದ್ಘಾಟಿಸಿದ ಎಂ.ನಾಗರಾಜ ಮಾತನಾಡಿದರು. ಶಿವಪ್ರಿಯ ಪತ್ತಿನ ಸೌಹರ‍್ದ ಸಹಕಾರಿ ಪ್ರಸಕ್ತ ಸಾಲಿನ ವರ‍್ಷಿಕ ವರದಿಯನ್ನು ಮುಖ್ಯ ಕರ‍್ಯನರ‍್ವಾಹಣಾಧಿಕಾರಿ ಎನ್.ಬಿ.ನವೀನಕುಮಾರ ಮಂಡಿಸಿದರು.
ಈ ಸಮಾರಂಭದಲ್ಲಿ ಸಹಕಾರಿಯ ಉಪಾಧ್ಯಕ್ಷ ವೆಂಕಯ್ಯಶೆಟ್ಟಿ, ಲೆಕ್ಕಪರಿಶೋಧಕ ಶ್ರೀನಿವಾಸ ನೀಲಜೇರಿ, ನರ‍್ದೇಶಕರಾದ ಶ್ರೀನಿವಾಸಶೆಟ್ಟಿ, ನೀಲಕಂಠಪ್ಪಗೌಡ, ಕಾನೂನು ಸಲಹೆಗಾರ ಎ.ಎನ್.ರಾಜು ವಕೀಲ, ವಿರೇಶಸ್ವಾಮಿ ರೌಡೂರು, ಗೋವಿಂದ ಪವಾರ್, ಶರಣಪ್ಪ ಮೇದಾ, ಶಿವಮರ‍್ತಿ, ಅಶೋಕಕುಮಾರ, ಲಲಿತಸಿಂಗ್, ರಣಚೂಡ್ ರಾಮ್, ಪಿ.ಪ್ರಸಾದ, ರವಿಚಂದ್ರ ಕಾಜಗಾರ, ರವಿಕುಮಾರ ಪ್ರದಾನಿ, ಕವಿತಾ ಷಣ್ಮಖಾಚಾರಿ, ಸರಸ್ವತಿ ಅಶೋಕಕುಮಾರ, ಸಿಬ್ಬಂದಿಗಳಾದ ಮಲ್ಲಿಕರ‍್ಜುನ ಪ್ರದಾನಿ, ದೇವಣ್ಣ, ಶ್ರುತಿ, ರಾಜು ಸೇರಿದಂತೆ ಸಹಕಾರಿಯ ಸದಸ್ಯರು, ವ್ಯಾಪಾರಸ್ಥರು ಇದ್ದರು.
ಈ ವೇಳೆ ಉತ್ತಮ ಗ್ರಾಹಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಶಿಕ್ಷಕ ಅಶೋಕಕುಮಾರ ನಿರೂಪಿಸಿದರು ಲಲಿತಸಿಂಗ್ ವಂದಿಸಿದರು.

WhatsApp Group Join Now
Telegram Group Join Now
Share This Article

Eshanya Times, Regional Kannada Daily is a leading news paper in Kalyana Karnataka (North Karnataka). Which is having large number of circulation in the districts of Raichur, Koppla, Bellary, Yadgir, Gulbarga, Bidar, Vijayanagara, Bagalkote and in the capital city of Bangalore.

This News Paper having Registred Office in Raichur City, Karnataka State.

The main mooto of the Eshanya Times news paper is to serve the nation and to give wide publicity of Government Developmental programmes and policies which are execuited in Government and also to give social justice to the people of Karnataka.

Copyright © 2024. Eshanya Times.  All Rights Reserved,

Powered By KhushiHost
24/7 Help Desk Support – Call Now +919060329333 

error: Content is protected !!