ಸುರಪುರ: ಇಂದು ಒಂದು ಸಮಾಜದ ಏಳಿಗೆಗೆ ಸಹಕಾರ ಸಂಘಗಳ ಪಾತ್ರ ಮುಖ್ಯವಾಗಿದೆ,ಅದರಂತೆ ನಮ್ಮ ಬಸವೇಶ್ವರ ಪತ್ತಿನ ಸಹಕಾರ ಸಂಘವು ಸಮಾಜದ ಏಳಿಗೆಯ ಜೊತೆಗೆ 2023-24ನೇ ಸಾಲಿನಲ್ಲಿ 1,02,61,695 ರೂಪಾಯಿಗಳ ಲಾಭ ಗಳಿಸಿದೆ ಎಂದು ಬಸವೇಶ್ವರ ಪತ್ತಿನ ಸಹಕಾರ ಸಂಘದ ಅಧ್ಯಕ್ಷರು ಹಾಗೂ ಕಲಬುರ್ಗಿ-ಯಾದಗಿರಿ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಡಾ.ಸುರೇಶ ಸಜ್ಜನ್ ತಿಳಿಸಿದರು.
ನಗರದ ರಂಗ0ಪೇಟೆಯ ವೀರಶೈವ ಕಲ್ಯಾಣ ಮಂಟಪದಲ್ಲಿ ನಡೆದ ಬಸವೇಶ್ವರ ಪತ್ತಿನ ಸಹಕಾರ ಸಂಘದ 29ನೇ ವರ್ಷದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ,ಒಂದು ಸಹಕಾರ ಸಂಘ ಬೆಳೆಯಲು ಸಾಲ ಪಡೆದವರು ಸಕಾಲದಲ್ಲಿ ಮರು ಪಾವತಿಸುವುದು ಮುಖ್ಯವಾಗಿರಲಿದೆ.ಅದರಂತೆ ಬಸವೇಶ್ವರ ಪತ್ತಿನ ಸಹಕಾರ ಸಂಘ ದಿಂದ ಸಾಲ ಪಡೆದ ಕಟ್ ಬಾಕಿದಾರರು ಶೀಘ್ರವೇ ಮರು ಪಾವತಿಸಬೇಕು ಎಂದು ಎಚ್ಚರಿಸಿದರು.ಇದೇ ಸಂದರ್ಭದಲ್ಲಿ ವಾರ್ಷಿಕ ವರದಿಯನ್ನು ಮಂಡಿಸಿ ಲಾಭದ ಹಣದ ಶೇ ೨೫ ರಷ್ಟುನ್ನು ಷೇರುದಾರರಿಗೆ ವಿತರಿಸಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂಘದ ನಿರ್ದೇಶಕ ಜಗದೀಶ ಪಾಟೀಲ್ ಸಂಘದ ಲಾಭ-ಹಾನಿ ಕುರಿತು ವರದಿ ಓದಿದರು,ಮತ್ತೋರ್ವ ನಿರ್ದೇಶಕ ಡಿ.ಸಿ ಪಾಟೀಲ್ ಕೆಂಭಾವಿ 2024-25ನೇ ಸಾಲಿನ ಆಯ-ವ್ಯಯ ಕುರಿತು ವರದಿ ಮಂಡಿಸಿದರು.ಸಭೆಯಲ್ಲಿ ಭಾಗವಹಿಸಿದ್ದ ಅನೇಕ ಜನ ಷೇರುದಾರರು ಮಾತನಾಡಿ,ಇನ್ನಷ್ಟು ಲಾಭ ಗಳಿಸುವ ನಿಟ್ಟಿನಲ್ಲಿ ಎಲ್ಲಾ ಸಾಲ ವಸೂಲಾತಿಗೆ ಆಡಳಿತ ಮಂಡಳಿ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಉಪಾಧ್ಯಕ್ಷರಾದ ಮನೋಹರ ಎಮ್.ಜಾಲಹಳ್ಳಿ,ನಿರ್ದೇಶಕರಾದ ವಿಶ್ವರಾಧ್ಯ ಸತ್ಯಂಪೇಟೆ,ರವೀ0ದ್ರ ಅಂಗಡಿ,ವಿಜಯಕುಮಾರ ಬಂಡೋಳಿ,ವೀರಪ್ಪ ಆವಂಟಿ,ಜಯಲಲಿತಾ ಪಾಟೀಲ್,ಶ್ವೇತಾ ಎಂ.ಗುಳಗಿ,ಬಸವರಾಜ ಬೂದಿಹಾಳ ಹಾಗೂ ಕಾನೂನು ಸಲಹೆಗಾರ ರಾಮನಗೌಡ ಸುಬೇದಾರ ಉಪಸ್ಥಿತರಿದ್ದರು.ಕಾರ್ಯಕ್ರಮದ ಆರಂಭದಲ್ಲಿ ವಿಶ್ವಗುರು ಸಾಂಸ್ಕೃತಿಕ ನಾಯಕ ಬಸವಣ್ಣ,ಸಹಕಾರ ಕ್ಷೇತ್ರದ ಧುರಿಣ ಸಿದ್ದಣಗೌಡ ಪಾಟೀಲ್ ಹಾಗೂ ನ್ಯಾಯವಾದಿ ದಿ.ಜಿ.ಎಸ್.ಪಾಟೀಲ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ಗೌರವಿಸಿದರು.ನಂತರ ಕಳೆದ ಕೆಲ ದಿನಗಳ ಹಿಂದೆ ಲಿಂಗೈಕ್ಯರಾದ ಅನೇಕ ಜನರ ಸಂಘದ ಷೇರುದಾರರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.ನಂತರ ಬಸವೇಶ್ವರ ವಿದ್ಯಾರ್ಥಿ ನಿಲಯದ ಹಳೆ ವಿದ್ಯಾರ್ಥಿಯಾದ ಪಿಎಸ್‌ಐ ಶಿವರಾಜ ಪಾಟೀಲ್,ಸಹಕಾರಿ ಧುರಿಣ ನಾರಾಯಣರಾವ್,ಪತ್ರಕರ್ತ ಡಿ.ಸಿ ಪಾಟೀಲ್ ಅವರನ್ನು ಹಾಗೂ ಎಸ್.ಎಸ್.ಎಲ್.ಸಿ ಯಲ್ಲಿ ಶೇ 89 ರಷ್ಟು ಅಂಕ ಪಡೆದ ವಿದ್ಯಾರ್ಥಿನಿ ಅನಿಷಾ ಗುರುರಾಜ ಚಂದನಕೇರಿ ಅವರನ್ನು ಮತ್ತು ಸಂಘದ ಉತ್ತಮ ಗ್ರಾಹಕರನ್ನು ಸನ್ಮಾನಿಸಿ ಗೌರವಿಸಲಾಯಿತು.ಕಾರ್ಯಕ್ರಮದಲ್ಲಿ ಸಂಘದ ಉಪ ಸಮಿತಿ ಸದಸ್ಯರು,ಸಹಕಾರ ಸಂಘಟನಾ ಸಮಿತಿ ಸದಸ್ಯರು ಸೇರಿದಂತೆ ನೂರಾರು ಜನ ಷೇರುದಾರರು ಭಾಗವಹಿಸಿದ್ದರು.ಪ್ರಕಾಶ ಅಂಗಡಿ ಕನ್ನೆಳ್ಳಿ ನಿರೂಪಿಸಿ,ಸ್ವಾಗತಿಸಿ, ವಂದಿಸಿದರು.