ಅಫಜಲಪುರ: ಈ ಭಾರಿ ನಡೆದ ಲೋಕಸಭಾ ಚುನಾವಣೆಯಲ್ಲಿ ಅಫಜಲಪುರ ಮತಕ್ಷೇದಿಂದ ಮತದಾರರು ಬಿಜೆಪಿ ಪಕ್ಷದ ಪರ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿದ್ದಾರೆ ಸುಮಾರು ೨೦ ಸಾವಿರ ಲೀಡ್ ಆಗಲಿದೆ ಎಂದು ತಾಲೂಕಿನ ದೇವಲಗಾಣಪುರ ಗ್ರಾಮದ ಬಿಜೆಪಿ ಮುಖಂಡ ದಿಗಂಬರ ಕರಜಗಿ ವಿಶ್ವಾಸ ವ್ಯಕ್ತಪಡಿಸಿದರು.
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಪರ ಮತ ದಾನ ಮಾಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ತಾಲೂಕಿನಲ್ಲಿ ಯುವಕರ ಕಣ್ಮಣಿ ಬಿಜೆಪಿ ಮುಖಂಡ ನಿತೀನ ಗುತ್ತೇದಾರವರ ನೇತೃತ್ವದಲ್ಲಿ ಲೋಕಸಭೆ ಚುನಾವಣೆ ಯಶಸ್ವಿ ಯಾಗಿದೆ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿಗೆ ಮತದಾನ ಮಾಡಿದ್ದಾರೆ ಬಹುತೇಕ ತಾಲೂಕಿನ ವಿವಿಧ ಮತಗಟ್ಟಿಯಲ್ಲಿ ಮತದಾರರು ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಅಭಿವೃದ್ಧಿ ಆಡಳಿತ ಮತ್ತು ದೇಶದ ಭದ್ರತೆ , ದೇಶದ ಜನರ ಬಹುದಿನ ಆಸೆ ಶ್ರೀರಾಮ ಮಂದಿರ ಉದ್ಘಾಟನೆ , ಮೋದಿಯವರ ೧೦ ರ‍್ಷಗಳ ಆಡಳಿತದ ಬಳಿಕವೂ ಅವರ ಜನಪ್ರಿಯತೆ ವೃದ್ಧಿಯಾಗುತ್ತಿದೆ.
ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಸಂಕಲ್ಪ ಮೋದಿಯವರದು
ಹೀಗಾಗಿ ಅನೇಕ ಅಭಿವೃದ್ಧಿ ವಿಚಾರಗಳನ್ನು ಮನಗೊಂಡು ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಿ ದೇಶ ಸೇವೆ ಮಾಡಲಿ ಎಂದು ಬಿಜೆಪಿಗೆ ಮತದಾರರು ಮತದಾನ ಮಾಡಿದ್ದಾರೆ ಕಲ್ಬರ‍್ಗಿಯ ಲೋಕಸಭಾ ಬಿಜೆಪಿ ಅಭ್ರ‍್ಥಿ ಉಮೇಶ ಜಾಧವ ಅವರು ಮತ್ತೊಮ್ಮೆ ಜಯ ಸಾಧಿಸಲಿದ್ದಾರೆ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂರ‍್ಭದಲ್ಲಿ ಮುಖಂಡರಾದ
ಮಹಾದೇವ ಬಿ ಗುತ್ತೇದಾರ .ಅಣ್ಣರಾವಗೌಡ ಪಾಟಿಲ ಲಕ್ಷ್ಮಣ ಹೇರೂರ. ಸಂತೋಷ ವಡಗೇರಿ ಚೀಚೋಲ ರ‍್ಜುಣಗಿ. ಕುನಾಲ್ ಪೂಜಾರಿ. ಕಾಂತು ಮಾವುರ. ಯಲ್ಲಪ್ಪಾ ರಮ್ಗಾ. ವಿಜಯ್ ವಡಗೇರಿ.ಸಾಗರ ವಡಗೇರಿ.ಅಲೋಕ್ ಪೂಜಾರಿ.ವಿನಾಯಕ. ಸಿ .ಗುತ್ತೇದಾರ. ಸುನಿಲ ದಂಡಗೋಲಕರ್ ಸೇರಿದಂತೆ ಇತರರು ಇದ್ದರು.