ರಾಯಚೂರು,ಜು.25: ಕೃಷ್ಣ ನದಿಗೆ 2.50 ಲಕ್ಷ ಕ್ಯೂಸೆಕ್ ನೀರು ಹರಿದು ಬಿಡಲಾಗಿದ್ದು, ದೇವದುರ್ಗ ತಾಲೂಕಿನ ಹೂವಿನಹೆಡಗಿ ಸೇತುವೆ ಮುಳುಗಡೆಗೊಂಡು ಸಂಪರ್ಕ ಸ್ಥಗಿತಗೊಂಡಿದೆ.
ಹೂವಿನಹೆಡಗಿ ಸೇತುವೆ ಮುಳಗುಡೆಯಿಂದ ಜಿಲ್ಲೆಯಿಂದ ಕಲ್ಬುರ್ಗಿ ಜಿಲ್ಲೆಗೆ ಸಂಪಕ ಕಲ್ಪಿಸುವ ರಸ್ತೆ ಬಂದ್‌ಆಗಿ ಸಂಚಾರ ಸ್ಥಗಿತಗೊಂಡಿದೆ. ಅಲ್ಲದೇ ನದಿ ಪಾತ್ರದಲ್ಲರಿವ ಹೂವಿನಹೆಡಗಿ ಗ್ರಾಮದ ಗಡ್ಡೆಗೂಳಿ ಬಸವೇಶ್ವರ, ಕೊಪ್ಪರದ ಶ್ರೀ ನರಸಿಂಹ ದೇವಸ್ಥಾನ, ಅಣೇಮಲ್ಲೇಶ್ವರ ದೇವಸ್ತನಗಳು ಮುಳುಗಡೆಯಾಗಿವೆ.
ಜಲಾಶಯದ 25 ಗೇಟ್‌ಗಳ ಮೂಲಕ 2,50,028ಕ್ಯೂಸೆಕ್ ನೀರು ಹರಿಸಲಾಗುತ್ತದ್ದು, ಸಂಜೆ ವೇಳೆಗೆ 3 ಲಕ್ಷ ಕ್ಯೂಸೆಕ್ಸ್ ನೀರು ಹರಿಯಲಿದ್ದು,ನದಿಪಾತ್ರದಲ್ಲಿ ಮತ್ತಷ್ಟು ಪ್ರವಾಹದ ಭೀತಿ ಎದುರಾಗಿದೆ. ನದಿಪಾತ್ರದ ಜನರು ನದಿಗೆ ಇಳಿಯದಂತೆ ತಾಲೂಕಾಡಳಿತ ಸೂಚನೆ ನೀಡಿದೆ.
ದೇವದುರ್ಗ ತಹಶೀಲ್ದಾರ್ ಚನ್ನಮಲ್ಲಪ್ಪ ಘಂಟಿ ಸೇತುವೆಗೆ ಭೇಟಿ ನೀಡಿ ಪರಿಶೀಲಿಸಿ ಕಟ್ಟೆಚ್ಚರ ವಹಿಸುವಂತೆ ಸೂಚನೆ ನೀಡಿದ್ದಾರೆ. ಪೊಲೀಸರನ್ನು ನಿಯುಕ್ತಿಗೊಳಿಸಲಾಗಿದ್ದು, ಸೇತುವೆ ಮೇಲೆ ವಾಹನ ಸವಾರರು ತೆರಳದಂತೆ ಸೂಚನೆ ನೀಡಲಾಗಿದೆ. ಕಲ್ಬುರ್ಗಿ ತೆರಳುವ ವಾಹನಗಳನ್ನು ತಿಂಥಣಿ ಬ್ರಿಜ್ ಮೂಲಕ ಸಂಚರಿಸಲುವ0ತೆ ಸೂಚಿಸಲಾಗಿದೆ. ನದಿ ಪಾತ್ರದ ದೇವಸ್ಥಾನಗಳು ಮುಳುಗಡೆಯಾಗಿದ್ದರಿಂದ ಪೂಜಾ ಕಾರ್ಯಗಳನ್ನು ನೆಡೆಸದಂತೆ ನಿರ್ಭಂಧಿಸಲಾಗಿದೆ. ಜನ,ಜಾನುವಾರುಗಳು ನದಿಗೆ ಇಳಿಸದಂತೆ ತಾಲೂಕ ಆಡಳಿತ ಜಾಗೃತಿ ಗೊಳಿಸುತ್ತಿದೆ.
ಜುರಾಲಾ ಯೋಜನೆ ಸ್ಥಳಕ್ಕೆ ಎ.ಸಿ. ಮಹಿಬೂಬಿ,ರಾಯಚೂರು ತಹಶೀಲ್ದಾರ್ ಸುರೇಶ ವರ್ಮಾ ಭೇಟಿ ನೀಡಿ ನೀರಿನ ಹರಿವು ಪರಿಶೀಲನೆ ಮಾಡಿದರು. ಜುರಾಲಾ ಹಿನ್ನರಿನಿಂದ ಮುಳುಗಡೆಯಾಗುವ ಗ್ರಾಮಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಗ್ರಾ.ಪಂ.ಗಳಿಗೆ ಸೂಚಿಸಿದರು.
ನದಿಯಲ್ಲಿ ನೀರಿ ಪರಮಾಣ 3 ಲಕ್ಷ 90 ಸಾ. ಕುಸೆಕ್ಸ್ಗೆ ಹೆಚ್ಚಳವಾದಲ್ಲಿ ಗುರ್ಜಾಪುರು ಬ್ಯಾರೇಜ್ ಮುಳುಗಡೆಯಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.