ಆರೋಗ್ಯ ಮೇಳ: ಉಚಿತ ಆರೋಗ್ಯ ತಪಾಸಣೆ ಮಾಡಿಕೊಂಡ 1227 ಜನ

Eshanya Times

ಕಲಬುರಗಿ : ಶುಕ್ರವಾಡಿ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ರಾಷ್ಟಿ0ಯ ನಗರ ಆರೋಗ್ಯ ಅಭಿಯಾನದಡಿಯಲ್ಲಿ ಜರುಗಿದ ಆರೋಗ್ಯ ಮೇಳದಲ್ಲಿ ಸುಮಾರು 1227 ಜನ ಉಚಿತ ಆರೋಗ್ಯ ತಪಾಸಣೆಯ ಲಾಭ ಪಡೆದರು.

ವಿಶೇಷವಾಗಿ ಆವರಣದಲ್ಲಿರುವ ವಿವಿಧ ಇಲಾಖೆಯ ಸರ್ಕಾರಿ ನೌಕರರು, ಕಚೇರಿಗೆ ಆಗಮಿಸಿದ ಸಾರ್ವಜನಿಕರು ಆರೋಗ್ಯ ತಪಾಸಣೆ ಮಾಡಿಕೊಂಡರು. ಆರೋಗ್ಯ ಇಲಾಖೆಯ ನಗರ ಆರೋಗ್ಯ ಕೇಂದ್ರ, ನಮ್ಮ ಕ್ಲೀನಿಕ್, ಆಯುಷ್ಮತಿ ವಿಭಾಗ, ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯಿಂದ ಮೂಳೆ ತಜ್ಞ, ಚರ್ಮ ತಜ್ಞ, ಗೈನಾಕೋಲಾಜಿಸ್ಟ್, ಜನರಲ್ ಫಿಶಿಷಿಯನ್, ಕ್ಯಾನ್ಸರ್ ತಜ್ಞ, ಮಕ್ಕಳ ತಜ್ಞ, ದಂತ ತಜ್ಞ, ಇ.ಎನ್.ಟಿ., ಕಣ್ಣು ವಿಭಾಗದ ತಜ್ಞ ವೈದ್ಯರು ಬಂದAತಹ ರೋಗಿಗಳನ್ನು ಉಚಿತ ತಪಾಸಣೆ ಮಾಡಿದರು.

ಇದರಲ್ಲಿ ಸುಮಾರು 102ಜನ ಲ್ಯಾಬ್ ಟೆಸ್ಟ್ ಸೇವೆ ಪಡೆದುಕೊಂಡರು. 130 ಜನರಿಗೆ ಕನ್ನಡಕ ಸ್ಥಳದಲಿಯೇ ವಿತರಿಸಲಾಯಿತು. ತಂಬಾಕು ಸೇವನೆ ಮಾಡುವ 49 ಜನರಿಗೆ ಸ್ಕೀನಿಂಗ್ ಮಾಡಲಾಯಿತು. ಇಲಾಖೆಯ ಐ.ಇ.ಸಿ. ಮಳಿಗೆಗೆ ಸುಮಾರು 214 ಜನ ಭೇಟಿ ನೀಡಿ ಆರೋಗ್ಯ ಇಲಾಖೆಯ ವಿವಿಧ ಯೋಜನೆಯ ಮಾಹಿತಿ ಪಡೆದುಕೊಂಡರು.

ಆರ0ಭದಲ್ಲಿ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಆರೋಗ್ಯ ಮೇಳ ಉದ್ಘಾಟಿಸಿ ಮಾತನಾಡಿದ ಅವರು, ವಿಶೇಷವಾಗಿ ಪ್ರತಿ ದಿನ ಒತ್ತಡದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳಿಗೆ ಉಚಿತ ಆರೋಗ್ಯ ತಪಾಸಣೆ ಮಾಡಲು ಆರೋಗ್ಯ ಇಲಾಖೆಯ ಇಡೀ ತಂಡ ಇಂದಿಲ್ಲಿ ಆಗಮಿಸಿದ್ದು ಶ್ಲಾಘನೀಯ ಎಂದ ಅವರು, ನೌಕರರು ಮತ್ತು ಸಾರ್ವಜನಿಕರು ಆರೋಗ್ಯ ಮೇಳದ ಲಾಭ ಪಡೆಯಬೇಕೆಂದು ಕರೆ ನೀಡಿ ಮುಂದಿನ ದಿನದಲ್ಲಿ ಕಂದಾಯ ಇಲಾಖೆಗೆ ಪ್ರತ್ಯೇಕವಾಗಿ ಮತ್ತು ಸಾರ್ವಜನಿಕರಿಗೆ ಬೃಹತ್ ಪ್ರಮಾಣದಲ್ಲಿ ಆರೋಗ್ಯ ಮೇಳ ಹಮ್ಮಿಕೊಳ್ಳುವ ಯೋಚನೆ ಹೊಂದಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಸೆಪ್ಟೆಂಬರ್ 24 ರಿಂದ ನವೆಂಬರ್ ೨೩ರವರೆಗೆ ಹಮ್ಮಿಕೊಂಡಿರುವ ತಂಬಾಕು ಮುಕ್ತ ಯುವ ಅಭಿಯಾನ ೨.೦ ಸಹಿ ಸಂಗ್ರಹ ಅಭಿಯಾನಕ್ಕೆ ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ತಮ್ಮ ಹಸ್ತಾಕ್ಷರ ನೀಡುವ ಮೂಲಕ ಚಾಲನೆ ನೀಡಿದರು.
ಆರೋಗ್ಯ ಮೇಳದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಲಬುರಗಿ ವಿಭಾಗೀಯ ಸಹ ನಿರ್ದೇಶಕ ಡಾ. ಅಂಬಾರಾಯ ರುದ್ರವಾಡಿ, ಡಿ.ಎಚ್.ಓ. ಡಾ. ಶರಣಬಸಪ್ಪ ಕ್ಯಾತನಾಳ, ಜಿಮ್ಸ್ ನಿರ್ದೇಶಕ ಡಾ. ಉಮೇಶ್ ಎಸ್.ಆರ್., ಪ್ರಭಾರಿ ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ. ವಿವೇಕಾನಂದ ರೆಡ್ಡಿ ಸೇರಿದಂತೆ ತಜ್ಞ ವೈದ್ಯರು ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

 

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

error: Content is protected !!
";