ಬಾಗಲಕೋಟೆ: ಸೆಪ್ಟೆಂಬರ 02 : ಬಾಗಲಕೋಟೆ ತಾಲೂಕಿನ ಮನೆ ಮನೆ ಭೇಟಿ, ಆಧಾರ ಸೀಡಿಂಗ್ ಹಾಗೂ ವಿವಿಧ ಶಾಲೆಗಳಿಗೆ ಸೋಮವಾರ ಅನಿರೀಕ್ಷಿತವಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಾಗಲಕೋಟೆ ತಾಲೂಕಿನ ಸೀಮಿಕೇರಿ ಗ್ರಾಮಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು ಮನೆ ಮನೆ ಸರ್ವೆ ಕಾರ್ಯ ಹಾಗೂ ಆಧಾರ ಸೀಡಿಂಗ್ ಕಾರ್ಯದ ಮಾಹಿತಿ ಪಡೆದುಕೊಂಡರು. ಸೀಮಿಕೇರ ಶಾಲೆಗೆ ಭೇಟಿ ನೀಡಿ ಮಕ್ಕಳ ವರ್ಗಗಳ ಕೋಣೆಗೆ ತೆರಳಿ ಮಕ್ಕಳದ ಜೊತೆ ಮಾತು ಮಾತನಾಡಿ ಚೆನ್ನಾಗಿ ಓದಲು ತಿಳಿಸಿದರು. ಮಕ್ಕಳ ಹಾಗೂ ಶಿಕ್ಷಕರ ಹಾಜರಾತಿ ಪರಿಶೀಲಿಸಿದರು. ಬಿಸಿ ಊಟದ ಕೋಣೆಗೆ ತೆರಳಿ ಮಕ್ಕಳಿಗೆ ನೀಡುತ್ತಿರುವ ಆಹಾರವನ್ನು ಪರಿಶೀಲಿಸಿದರು. ಮಲ್ಲಾಪೂರದಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದರು. ಭೇಟಿ ಸಮಯದಲ್ಲಿ ತಹಶೀಲ್ದಾರ ಅಮರೇಶ ಪಮ್ಮಾರ ಇದ್ದರು.